ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಪುರಸಭೆಯ ಅರೆಬರೆ ಕಾಮಗಾರಿಗಳ ಬಗ್ಗೆ ಈತನಕ ಹಲವಾರು ಬಾರಿ ವರದಿಯನ್ನು ಮಾಡಲಾಗಿತ್ತು. ಅದರಲ್ಲಿ ಮುಖ್ಯವಾದವುಗಳು ನಾಗರಕಟ್ಟೆಯ ಒಳಚರಂಡಿ ಅವ್ಯವಸ್ಥೆ.

ಹುಡ್ಕೋ ಕಾಲೋನಿಯ ಅರೆಬರೆ ಪೈಪ್ ಕಾಮಗಾರಿ.  ಪುರಸಭೆಯ ಪಾರ್ಕ್ ಗಳಲ್ಲಿ ಸ್ವಚ್ಛತೆಯ ಕೊರತೆ. ಬಸ್ಸು ನಿಲ್ದಾಣದ ಅವ್ಯವಸ್ಥೆಗಳು. ಇತ್ಯಾದಿ. 

ಬಸ್ಸು ನಿಲ್ದಾಣದ ರಿಕ್ಷಾ ಸ್ಟ್ಯಾಂಡ್ ನ ಎದುರುಗಡೆಯ ಪೈಪು ಒಡೆದು ನೀರು ಪೋಲಾಗುತ್ತಿರುವುದನ್ನು ಫೋಟೋ ಸಮೇತ ನಾಲ್ಕು ಬಾರಿ ವರದಿ ಮಾಡಿದ ಪರಿಣಾಮ ನಿನ್ನೆಯಷ್ಟೇ ಅರ್ಧಗಂಟೆಯ ಅರೆಬರೆ ಕಾಮಗಾರಿಯನ್ನು ನಡೆಸಲಾಗಿತ್ತು. ಕೇವಲ ಅರ್ಧವೇ ದಿನದಲ್ಲಿ ಮತ್ತೊಮ್ಮೆ ಚಿತ್ರದಲ್ಲಿ ಕಾಣಿಸಿರುವಂತೆ ನೀರು ಪೋಲಾಗುತ್ತಿರುವುದನ್ನು ಕಾಣಬಹುದಾಗಿದೆ.

ಪುರಸಭೆಯು ಕೌನ್ಸಿಲರ್ ಗೆ ತಿಳಿಸದೆ ಅರೆಬರೆ ಕಾಮಗಾರಿ ನಡೆಸಿ ಕೈತೊಳೆದುಕೊಂಡಿದೆ.

ಅರೆ ಬರೆ ಕಾಮಗಾರಿಗೆ ಇದಕ್ಕಿಂತ ಸುಸ್ಪಷ್ಟ ಸಾರ್ವಜನಿಕ ನಿದರ್ಶನ ಬೇರೆ ಬೇಕೇ??