ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಬನ್ನಡ್ಕ ಗುರು ರಾಘವೇಂದ್ರ ಮಠದಲ್ಲಿ 354 ನೇ ಆರಾಧನಾ ಮಹೋತ್ಸವ ಆಗಸ್ಟ್ 10 ರಿಂದ 12 ರಂದು ತನಕ ನಡೆಯಲಿದೆ. ಆಗಸ್ಟ್ 10 ರಂದು ಬೆಳಗ್ಗೆ ಅಭಿಷೇಕ, ಅಲಂಕಾರದ ತರುವಾಯ ಗಂ.10 ಕ್ಕೆ ಕುಣಿತ ಭಜನೆ, ಗಂ.11 ಕ್ಕೆ ಭಕ್ತಿ ಭಜನೆ, ಮಹಾ ಪೂಜೆ, ಪ್ರಸಾದ ವಿತರಣೆ, ಸಂಜೆ ಯಕ್ಷಗಾನ, ರಂಗಪೂಜೆ, ಸೇವೆಗಳು ಜರುಗಲಿವೆ.
ಆಗಸ್ಟ್ 11 ರಂದು ವಾಯು ಸ್ತುತಿ, ಅಷ್ಟೋತ್ತರ, ಗಂ. 11 ರಿಂದ ವೀಣಾ ವಾದನ, ಅಲಂಕಾರ ಪೂಜೆ, ಸಂತರ್ಪಣೆ ನಡೆಯುತ್ತದೆ. ಸಂಜೆ ಭಕ್ತಿ ಭಜನೆ, ರಂಗ ಪೂಜೆ, ಸೇವೆಗಳು ಜರುಗಲಿವೆ.
ಆಗಸ್ಟ್ 12 ರಂದು ಪಂಚಾಮೃತ ಅಭಿಷೇಕ, ಪೂಜೆ, ಗಂ.11 ರಿಂದ ಭಕ್ತಿ ಭಜನೆ, ಪ್ರಸಾದ ವಿತರಣೆ, ಸಂಜೆ ಭಕ್ತಿ ಭಜನೆ, ರಂಗಪೂಜೆ, ಉತ್ಸವ, ಅಷ್ಟಾವಧಾನ, ಸೇವೆಗಳು ನಡೆಯುತ್ತವೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.