ಫೋಟೋ ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ನೇತಾಜಿ ಬ್ರಿಗೇಡ್ ರ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಮಾಜ ಮಂದಿರದಲ್ಲಿ ಉಚಿತ ವೈದ್ಯಕೀಯ ಶಿಬಿರ, ಚಿತ್ರಕಲಾ ಸ್ಪರ್ಧೆ ನಡೆಯಿತು.
ಮಧ್ಯಾಹ್ನ ನಡೆದ ಸಹಾಯ ಧನ ವಿತರಣೆ,ಸಾಧಕರ ಸಂಮಾನ ಮಾಡಿ ಮಾತನಾಡಿದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಕಂಬಳ ಸಂದರ್ಭದಲ್ಲಿ ವೇಷ ಹಾಕಿ ಸಂಗ್ರಹಿಸಿದ 20 ಲಕ್ಷಕ್ಕೂ ಹೆಚ್ಚು ಹಣವನ್ನು ಅಶಕ್ತ ಅನಾರೋಗಿ ಕುಟುಂಬಗಳಿಗೆ ನೀಡಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಉಚಿತ ಪುಸ್ತಕ ವಿತರಣೆ ಮಾಡಿದ್ದಾರೆ. ನಿರಂತರ 142 ವಾರ ಸ್ವಚ್ಛತಾ ಕಾರ್ಯ ಮಾಡಿದ್ದಾರೆ. ಇನ್ನು ಹಲವಾರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಸೇವೆ.
ವೇದಿಕೆಯಲ್ಲಿ ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕೆ.ಎಂ.ಎಫ್. ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮೂಡಾದ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ವಕೀಲ ಶಾಂತಿ ಪ್ರಸಾದ್ ಹೆಗ್ಡೆ, ಮಾಜಿ ಮಂತ್ರಿ ಅಭಯ ಚಂದ್ರ ಜೈನ್, ಹಾಜರಿದ್ದರು.
ಬ್ರಿಗೇಡ್ ನ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಐದನೇ ವರ್ಷದ ಸವಿನೆನಪಿಗಾಗಿ ಹತ್ತು ಮಂದಿ ಸಾಧಕರನ್ನು ಸನ್ಮಾನಿಸಲಾಗಿದೆ. ಕನ್ನಡ ರಾಜ್ಯೋತ್ಸವದಂದು ಉಚಿತ ಉಪಹಾರವನ್ನು ಒದಗಿಸಿ ಕನ್ನಡ ಪ್ರೇಮವನ್ನು ಸಾದರ ಪಡಿಸಿದ ಸಾರ್ವಜನಿಕ ಸೇವಕ ಮಿಜಾರು ರಘುವೀರ್ (ಅಮ್ಮಿಯಣ್ಣ), ದೇಶ ವಿದೇಶದಲ್ಲಿ ತಿಳಿ ಹಾಸ್ಯದ ಮೂಲಕ ಪ್ರಸಿದ್ಧರಾದ ಯಕ್ಷಗಾನ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಉತ್ತಮ ಅಂಚೆ ಪೇದೆ ಸೇವಕ ಶ್ಯಾಮ ಸುಂದರ್ ಮಾಸ್ತಿಕಟ್ಟೆ, ಖ್ಯಾತನಾಟಿ ವೈದ್ಯ, ಯಕ್ಷಗಾನ ಕಲಾವಿದ ಸುಂದರ ಬಂಗಾಡಿ, ಯಶಸ್ವಿ ಹಾಸ್ಯ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ ಕೋಡಪದವು, ಬಹಳ ಕಡಿಮೆ ಬೆಲೆಯಲ್ಲಿ ಹೋಟೆಲ್ ನ ಚಹಾ, ತಿಂಡಿ, ಊಟ ನೀಡುತ್ತಿರುವ ಬಿರಾವು ಕಲ್ಯಾಣಿ ಶೆಟ್ಟಿ, ಹೆಲ್ಪ್ ಟು ಸೇವ್ ಲೈಫ್ ಸಂಸ್ಥೆಯ ಮೂಲಕ ನೆರವು ಸಹಾಯ ಮಾಡುತ್ತಿರುವ ಬಂಟ್ವಾಳದ ಅರ್ಜುನ ಭಂಡಾರ್ಕರ್, ಕೊರೋನಾ ಸಂದರ್ಭ ಉಚಿತ ಅಂಬುಲೆನ್ಸ್ ಸೇವೆ ನೀಡಿದ ಪ್ರಶಾಂತ್ ಬಿ ಶೆಟ್ಟಿ, ಬೆದ್ರ ಎಲೆಕ್ಟ್ರಿಕಲ್ ಸಂಸ್ಥೆ ಮಾಲಕ, ಪುರಸಭಾ ಮಾಜಿ ಅಧ್ಯಕ್ಷ, ಸಮಾಜಸೇವಕ ಮಾಸ್ತಿಕಟ್ಟೆ ಪ್ರಸಾದ್ ಕುಮಾರ್, ಸೇವಾ ಯಜ್ಞ ಸಂಸ್ಥೆಯ ಮಾಲಕ, ಸಮಾಜಮುಖಿ ಕಾರ್ಯಕರ್ತ ಒಂಟಿ ಕಟ್ಟೆ ನಾಗರಾಜ್ ಪೂಜಾರಿ. ಹೀಗೆ ಒಟ್ಟು ಹತ್ತು ಮಂದಿ ಸಮಾಜಮುಖಿ ಸಾಧಕರನ್ನು ಸನ್ಮಾನಿಸಲಾಯಿತು.