ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆಯ ವಿವಿಧ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಉದ್ಯೋಗ ಅರಸಿಕೊಂಡು ಬೆಂಗಳೂರಿನ ಪ್ರದೇಶಕ್ಕೆ ಮೂಡುಬಿದಿರೆಯ ಕೃಷ್ಣಪ್ಪ ಮತ್ತು ಮಲ್ಲಿಕಾ ದಂಪತಿಗಳ ಪುತ್ರಿ ಅಕ್ಷತಾ ಎಡತಾಕಿದರು. ಬೆಂಗಳೂರಿನಲ್ಲಿ ಮಾನ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿ ಕಂಪನಿಗೆ ಸೇರಿಕೊಂಡ ಅಕ್ಷತಾ ಬಿಡುವಿನ ಸಮಯದಲ್ಲಿ ಜಾಹೀರಾತುಗಳಲ್ಲೂ ತನ್ನ ಪ್ರೌಢಿಮೆ ತೋರಿಸಲು ಪ್ರಾರಂಭಿಸಿದಳು.

ಜ್ಯುವೆಲ್ಲರಿ ಇತ್ಯಾದಿ ಜಾಹಿರಾತುಗಳಲ್ಲಿ ಈಕೆಯ ಪ್ರೌಢಿಮೆಯನ್ನು ವೀಕ್ಷಿಸಿದ ಸ್ಯಾಂಡಲ್ ವುಡ್ ಮಂದಿ ಒಂದೆರಡು ಕಿರುಚಿತ್ರ ಹಾಗೂ ವೆಬ್ ಚಿತ್ರಗಳಿಗೆ ಈಕೆಯ ಪ್ರತಿಭೆಯನ್ನು ಬಳಸಿಕೊಂಡರು. ಅನಂತರ ಗುಬ್ಬಚ್ಚಿ ಸಿನಿಮದಲ್ಲಿ ತನ್ನ ಯಶಸ್ಸನ್ನು ಕಂಡುಕೊಂಡ ಈಕೆ, ಇದೀಗ ವಿ 7 ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ "ಕಲಿ ಕದನದೋಳ್" ಎಂಬ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾದಲ್ಲಿ ಉತ್ತಮ ಅವಕಾಶವನ್ನು ಕಂಡುಕೊಂಡಿದ್ದಾಳೆ. ಈಕೆಗೆ ಇನ್ನಷ್ಟು ಉತ್ತಮ ಅವಕಾಶಗಳು ದೊರಕಿ ಅಕ್ಷತೆಯಂತೆ ಸ್ಯಾಂಡಲ್ವುಡ್ ನಲ್ಲಿ ಬೆಳಗಲಿ ಎಂದು ಹಾರೈಸುತ್ತೇವೆ.