ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಜವನೆರ್ ಬೆದ್ರ ಫೌಂಡೇಶನ್ ರವರ 7ನೇ ವರ್ಷದ ದೀಪಾವಳಿ ಸಂಭ್ರಮ ಕಲ್ಸಂಕದ ಗೋಪಾಲಕೃಷ್ಣ ದೇವಾಲಯದಲ್ಲಿ ನವೆಂಬರ್ 3ರಂದು ನಡೆಯಿತು. ಆದಿ ಕಲ್ಚರ್ ಅಕಾಡೆಮಿಯ ಸುಮನಾ ಪ್ರಸಾದ್ ತಂಡದವರ ಭಕ್ತಿ ಗಾನ ಸಿಂಚನ ಕಾರ್ಯಕ್ರಮ ನಡೆಯಿತು. ತರುವಾಯ ಗೂಡುದೀಪ, ರಂಗೋಲಿ ಸ್ಪರ್ಧೆ ದೇವಾಲಯದ ವಠಾರದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಜನೆ ಕುಣಿತ ಮಾಡಿಕೊಂಡು ಶ್ರೀಕೃಷ್ಣ ವೇಷದಲ್ಲಿ ಭಾಗವಹಿಸಿದ್ದ ಪುಟಾಣಿ ವರ್ಷ ಕೆ ಅವರನ್ನು ಹಾಗೂ ಯೋಧ ನಮನ ಕಾರ್ಯಕ್ರಮಕ್ಕೆ ನಿಯುಕ್ತರಾಗಿದ್ದ ಮಾರೂರು ಸಂದೀಪ್ ಎಂ ಶೆಟ್ಟಿ ಅವರು ಕರ್ತವ್ಯ ನಿರತರಾಗಿದ್ದ ಕಾರಣ ಅವರ ಪರವಾಗಿ ಅವರ ತಂದೆ ತಾಯಿ ರಾಜೇಶ್ ಶೆಟ್ಟಿ ಹಾಗೂ ರತಿ ದಂಪತಿಗಳನ್ನು ಸನ್ಮಾನಿಸಲಾಯಿತು. 

ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ: ರಕ್ಷಿತಾ ಅಂಚನ್ ಮಾರ್ನಾಡು, ದ್ವಿತೀಯ: ಶ್ರಾವ್ಯ ಪುತ್ತಿಗೆ, ತೃತೀಯ: ಪ್ರೇರಣಾ ಶೆಟ್ಟಿ, ಗೂಡು ದೀಪ ಸ್ಪರ್ಧೆ, ಆಧುನಿಕ ವಿಭಾಗ: ಪ್ರಥಮ: ಮಂಗಳೂರು ಅಶೋಕನಗರದ ವಿಠ್ಠಲ್ ಭಟ್, ದ್ವಿತೀಯ: ಜಗದೀಶ್ ಅಮೀನ್ ಸುಂಕದಕಟ್ಟೆ, ತೃತೀಯ: ಪೂಜಾ ಮಾರ್ನಾಡು ಹಾಗೂ ಸಾಂಪ್ರದಾಯಿಕ ವಿಭಾಗ: ಪ್ರಥಮ: ಸತೀಶ್ ಬೆಟ್ಕೇರಿ, ದ್ವಿತೀಯ: ಐಶ್ವರ್ಯ ಕಾಮತ್ ಒಂಟಿ ಕಟ್ಟೆ, ತೃತೀಯ: ರೀತೇಶ್ ರವರುಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. 

ವೇದಿಕೆಯಲ್ಲಿ ಬಹುಮಾನವನ್ನು ವಿತರಿಸಿ ಹಿರಿಯ ವಕೀಲರಾದ ಕೆ ಆರ್ ಪಂಡಿತ್, ಆಳ್ವಾಸ್ ಫೌಂಡೇಶನ್ ನ ವಿವೇಕ್ ಆಳ್ವ, ಬಿಜೆ ಪಿ ಯ ದ.ಕ.ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಎಮ್, ಇನ್ನರ್ ವೀಲ್ ಅಧ್ಯಕ್ಷೆ ಬಿಂದಿಯ ಶರತ್ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್, ಗೋಪಾಲಕೃಷ್ಣ ದೇವಾಲಯದ ಆಡಳಿತ ಮುಕ್ತೇಸರ ಗುರುಪ್ರಸಾದ್ ಹೊಳ್ಳ, ಮಾತನಾಡಿ ಶುಭ ಹಾರೈಸಿದರು. ಜವನೆರ್ ಬೆದ್ರ ಫೌಂಡೇಶನ್ ನ ಅಧ್ಯಕ್ಷ ಅಮರ್ ಕೋಟೆ, ಪದಾಧಿಕಾರಿಗಳು ಹಾಜರಿದ್ದರು.

ದಸ್ಕತ್ ಸಿನಿಮಾದ ವಿಶ್ವನಾಥ, ನಟ ದೀಕ್ಷಿತ್ ಅನ್ಡಿಂಜೆ, ಧಾರ್ಮಿಕ ಪಾರಂಪರಿಕ ತಿಂಡಿ ತಿನಿಸು ರಚಿಸಿ youtube ಅಲ್ಲಿ ಹೆಸರುವಾಸಿಯಾದ ವಿನಯ ಡಿ ಕಿಣಿ, ಇನ್ಸ್ಟಾಗ್ರಾಮ್ ನಲ್ಲಿ ಖ್ಯಾತ ಸೂರಜ್ ಅಂಚನ್ ಇತ್ಯಾದಿಯರನ್ನು ಗೌರವಿಸಲಾಯಿತು.