ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ: ನಮ್ಮ ಕುಡ್ಲದ 25 ರ ಸಂಭ್ರಮ ಕಂಬಳ ಪ್ರಶಸ್ತಿ ಪ್ರದಾನದೊಂದಿಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಗಸ್ಟ್ 12 ರಂದು ನಡೆಯಲಿದೆ. ತತ್ಸಂಬಂಧಿ ಆಮಂತ್ರಣ ಪತ್ರಿಕೆ ಬಿಡುಗಡೆ ಮೂಡುಬಿದಿರೆ ಜಿಲ್ಲಾ ಕಂಬಳ ಸಮಿತಿಯ ವ್ಯವಸ್ಥಾಪಕರ ಸಭೆಯಲ್ಲಿ ಆಗಸ್ಟ್ ಮೂರರಂದು ಸಮಾಜ ಮಂದಿರದಲ್ಲಿ ನಡೆಯಿತು. 

ಶರವು ಮಹಾಗಣಪತಿ ದೇವಸ್ಥಾನ ದ ರಾಘವೇಂದ್ರ ಶಾಸ್ತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾಣಿಲ, ಗುರುಪುರ ಸ್ವಾಮೀಜಿಗಳು, ಕಟೀಲು ಅಸ್ರಣ್ಣರುಗಳು, ತಂತ್ರಿಗಳು, ವಿವಿಧ ದೇವಾಲಯದ ಪ್ರಧಾನ ಅರ್ಚಕರು, ಆಡಳಿತ ಮೊಕ್ತೇಸರರು, ವಿವಿಧ ಟ್ರಸ್ಟ್ -ಪರಿಷತ್ತುಗಳ ಅಧ್ಯಕ್ಷರುಗಳು ಅತಿಥಿಗಳಾಗಿ ಭಾಗವಹಿಸುವರು.

ಮಧ್ಯಾಹ್ನ ತಮ್ಮನ ಬಲ್ಮನದಲ್ಲಿ ವಿವಿಧ ಧರ್ಮದರ್ಶಿಗಳು, ಶಾಸಕರು, ನೇತಾರರು ಭಾಗವಹಿಸಲಿದ್ದಾರೆ.

ಸಂಜೆಯ ಸಮಾರೋಪದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಗಳು, ಸಚಿವರುಗಳು, ಮಾಲಕರುಗಳು , ಅಧ್ಯಕ್ಷರುಗಳು, ಸಿನಿಮಾ ತಾರೆಯರು ಭಾಗವಹಿಸಲಿದ್ದಾರೆ.

ಈ ನಡುವೆ ಸಂಗೀತ,ವಿವಿಧ ನೃತ್ಯ ತಂಡಗಳು, ಯಕ್ಷ  ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 7 ರಿಂದ ಕಂಬಳ ಬೊಳ್ಳಿ ಪ್ರಶಸ್ತಿ ಹಿರಿಯ ಓಟಗಾರ ಅಳದಂಗಡಿ ರವಿಕುಮಾರ್, ಕಂಬಳ ಸಾಧಕ ಕೋಣ ಪ್ರಶಸ್ತಿ ಪದವು ಕಾನಡ್ಕ ದೂಜ ಮತ್ತು ನಂದಳಿಕೆ ಚಾಂಪಿಯನ್ ಕುಟ್ಟಿ ಕೋಣಗಳಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.