ವರದಿ ರಾಯಿ ರಾಜಕುಮಾರ್

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಕೀರ್ತಿಶೇಷ ಬಲಿಪ ಭಾಗವತ ದ್ವಯರ ಪುಣ್ಯ ಸ್ಮೃತಿ ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಯ ರಾಜ್ಯಸಭಾ ಗೃಹದಲ್ಲಿ ನಡೆಯಿತು. ನವೆಂಬರ್ 2ರಂದು ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ, ವಿವಿಧ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾದ  ಯುವರಾಜ್ ಜೈನ್ ವಹಿಸಿದ್ದರು. ಅವರು ಮಾತನಾಡಿ ನಮ್ಮ ಸಂಸ್ಥೆ ಶಿಕ್ಷಣಕ್ಕಿಂತಲೂ ಹೆಚ್ಚಿನ ಪ್ರಾಧಾನ್ಯತೆಯನ್ನು ಕಲೆ, ಸಂಸ್ಕೃತಿ, ಸಂಸ್ಕಾರ ಇತ್ಯಾದಿಗಳಿಗೆ  ನೀಡಿದೆ. ಯಕ್ಷಗಾನ ಪರಂಪರೆ ಬೆಳೆದಷ್ಟೂ ಭಾಷಾ ಪ್ರೌಢಿಮೆ ಬೆಳೆಯಬಲ್ಲದು. ಮುಂದಿನ ಜನಾಂಗಕ್ಕೆ ಉತ್ತಮ ಸಂಸ್ಕಾರ ದೊರೆಯುವಂತಾಗಲು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಬೇಕು ಎಂದು ಆಶಿಸಿದರು. 

ಇದೇ ಸಂದರ್ಭದಲ್ಲಿ ಖ್ಯಾತ ಹಿಮ್ಮೇಳವಾದಕ ಪೆರುವಾಯಿ ನಾರಾಯಣ ಭಟ್ ಅವರನ್ನು ಬಲಿಪ ಭಾಗವತ ರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ನಾರಾಯಣ ಭಟ್ ಬಲಿಪ ಭಾಗವತರ ಕೊಂಡಿಗಳಾದ ಶಿವಶಂಕರ ಹಾಗೂ ಪುಂಡಿ ಕಾಯಿ ಗೋಪಾಲಕೃಷ್ಣ ಭಟ್ ಅವರುಗಳು ಬಲಿಪ ಪರಂಪರೆಯನ್ನು ಉಳಿಸಿ ಬೆಳೆಸಬೇಕೆಂದು ಕೇಳಿಕೊಂಡರು. 

ಉತ್ತಮ ಸ್ವರ ಮಾಧುರ್ಯಕ್ಕೆ ಹೆಸರಾದ, ಅವಿಭಕ್ತ ಕುಟುಂಬವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ, ಸರಳ, ಸಜ್ಜನ ಸತ್ಯದ ಅರಿವನ್ನು ಹೊಂದಿರುವ ಬಲಿಪ ಪರಂಪರೆ ಇನ್ನಷ್ಟು ಬೆಳೆಯಬೇಕು, ಮುಂದಿನ ಪೀಳಿಗೆಯೂ ಕೂಡ ಇಂತಹ ಉತ್ತಮ ಸಂಸ್ಕಾರವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಮುಖ್ಯ ಅತಿಥಿಗಳಾಗಿ ಹಾಜರಿದ್ದ ಉದ್ಯಮಿ ಶ್ರೀಪತಿ ಭಟ್, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಮಾಜಿ ಸಚಿವ ಅಭಯ ಚಂದ್ರ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಧರ್ಮಸ್ಥಳ ಭುಜಬಲಿ ಉಪಸ್ಥಿತರಿದ್ದರು. 

ಉಪನ್ಯಾಸಕ ವಾದಿರಾಜ ಕಲ್ಲೂರಾಯ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ವಿಕ್ರಂ ಭಟ್ ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯಕ್ರಮದ ತರುವಾಯ ಗುರುದಕ್ಷಿಣೆ ಯಕ್ಷಗಾನ ತಾಳಮದ್ದಳೆ ಹೆಸರಾಂತ ಕಲಾವಿದರಿಂದ ನಡೆಯಿತು.