ಮುಂಬಯಿ : ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡಲು ಭಾಗ್ಯ ಬೇಕು. ಈ ಒಂದು ಅವಕಾಶದಿಂದ ನಾವು ದೇವರ ಸೇವೆಯೊಂದಿಗೆ ಸಮಾಜ ಸೇವೆ ಮಾಡುವಂತಾಗಿದೆ.  ಈ ಸೌಭಾಗ್ಯವು ಈ ಪೂಜಾ ಸಮಿತಿಯ ಮೂಲಕ ನಮಗೆ ದೊರಕಿದೆ. ನಾವು ಮಾಡುತ್ತಿರುವ ಎಲ್ಲಾ ಸೇವೆಗಳು ದೇವರಿಗೆ ಸಮರ್ಪಿತವಾಗಿರಬೇಕು. ಒಗ್ಗಟ್ಟಿನಿಂದ ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ. ಮುಂದಿನ ವರ್ಷ ಚಾರಿಟೇಬಲ್ ಟ್ರಷ್ಟಗೆ 25ನೇ ವರ್ಷ. ಜನವರಿ 4 ರಿಂದ 6 ರ ತನಕ ಶನಿದೇವರ ಪುನರ್ಪ್ರತಿಷ್ಥೆ ಹಾಗೂ ವಾರ್ಷಿಕ ಪೂಜೆ ನಡೆಯಲಿದೆ. ಮುಂದಿನ ವರ್ಷಗಳಲ್ಲಿ ಸಂಭ್ರಮವೇ ಸಂಭ್ರಮ ಆದುದರಿಂದ ಎಲ್ಲರೂ ಕ್ಷೇತ್ರದ ಅಭಿವೃದ್ದಿಗೆ ದುಡಿಯಬೇಕು ಎಂದು ಮಲಾಡ್ ಪೂರ್ವ ಕುರಾರ್ ವಿಲೇಜ್ ನ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ  ನುಡಿದರು.

ಮಲಾಡ್ ಪೂರ್ವ ಕುರಾರ್ ವಿಲೇಜ್ ನ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಹಾಗೂ ಚಾರಿಟೇಬಲ್ ಸೊಸೈಟಿಯ 24ನೇ  ವಾರ್ಷಿಕ ವಿಶೇಷ ಮಹಾಸಭೆಯು ಡಿ. 25 ರಂದು ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಸಮೀಪದ ಶಾಲಾ ವಠಾರದಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಪಿ. ಎಸ್. ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಹರೀಶ್ ಜೆ ಸಾಲ್ಯಾನ್ ಲೆಕ್ಕ ಪತ್ರವನ್ನು ಸಭೆಯ ಮುಂದಿಟ್ಟರು. ವೇದಿಕೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಜೆ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಆನಂದ ಕೋಟ್ಯಾನ್  ಉಪಸ್ಥಿತರಿದ್ದರು. 

ಸಭೆಯಲ್ಲಿ ಸಮಿತಿಯ ಸಲಹೆಗಾರರಾದ ಶ್ರೀಧರ ಆರ್ ಶೆಟ್ಟಿ, ಐತು ದೇವಾಡಿಗ, ಚಾರಿಟೀಬಲ್ ಟ್ರಷ್ಟನ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು. ಚಾರಿಟೀಬಲ್ ಟ್ರಷ್ಟನ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ , ಭ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್ ಕುಲಾಲ್ ಸೂಕ್ತ ಸಲಹೆ ಸೂಚನೆಯಿತ್ತರು.

ಆ ಬಳಿಕ ಶ್ರೀ ಶನಿಮಹಾತ್ಮಾ ಚಾರಿಟೇಬಲ್ ಸೊಸೈಟಿಯ 47ನೇ  ವಾರ್ಷಿಕ  ಮಹಾಸಭೆಯು ಚಾರಿಟೀಬಲ್ ಟ್ರಷ್ಟನ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಕೋಶಾಧಿಕಾರಿ ಮಹೇಶ್ ಸಾಲ್ಯಾನ್ ಲೆಕ್ಕ ಪತ್ರವನ್ನು ಮಂಡಿಸಿದರು. 

ವಾರ್ಷಿಕ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಆಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಸತ್ಯನಾರಾಯಣ ಮಹಾಪೂಜೆಯು ಶ್ರೀನಿವಾಸ ಸಾಫಲ್ಯ ದಂಪತಿಗಳ ಯಜಮಾನಿಕೆಯಲ್ಲಿ ನೆರವೇರಿತು. ಪೂಜಾ ವಿಧಿಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ತುಂಗಾ ರಾಘವೇಂದ್ರ ಭಟ್ ನೆರವೇರಿಸಿದರು.

ವರದಿ : ಈಶ್ವರ ಎಂ ಐಲ್

ಚಿತ್ರ : ದಿನೇಶ್ ಕುಲಾಲ್