ಮಂಗಳೂರು:  ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾಸಂಸ್ಥೆಯ ಅಂಗ ಸಂಸ್ಥೆ ‘ಶಕ್ತಿ ಎಡ್ವಾನ್ಸ್‍ಡ್ ಲರ್ನಿಂಗ್ ಅಕಾಡೆಮಿ’ಯು ಜೂನ್ ತಿಂಗಳಿನಿಂದ ವರ್ಷ ಪೂರ್ತಿ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ನಗರದ ಇತರೆ ಶಾಲೆಗಳ ಹೈಸ್ಕೂಲ್ (8,9 ಮತ್ತು 10ನೇ)  ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ದಿನ ಸಂಜೆ 4.30ರಿಂದ 6.00 ಗಂಟೆಯವರೆಗೆ ಶಕ್ತಿ ಶಿಕ್ಷಣ ಸಂಸ್ಥೆ ಮತ್ತು ಬಿಕರ್ನಕಟ್ಟೆಯ ಶಕ್ತಿ ಎಡ್ವಾನ್ಸ್‍ಡ್ ಲರ್ನಿಂಗ್ ಸಂಸ್ಥೆಯಲ್ಲಿ NEET/JEE ಯ ತರಗತಿಯನ್ನು ಪ್ರಾರಂಭಿಸುತ್ತಿದೆ. 

ಪಿ.ಸಿ.ಎಂ.ಬಿ. ವಿಷಯಗಳಿಗೆ ತರಬೇತಿ ನೀಡಲಾಗುವುದು. ಪ್ರತಿ ವಿಷಯಕ್ಕೆ 80 ಗಂಟೆಗಳು ಮೀಸಲಿರಿಸಲಾಗಿರುತ್ತದೆ. ಪ್ರತೀ ವಾರದ ಕೊನೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಪರೀಕ್ಷೆಗಳು ಮತ್ತು ತರಬೇತಿಗಳು ಪಿ.ಯು. ಹಂತದ ಕೋಚಿಂಗ್ ರೀತಿಯಲ್ಲೆ ನಡೆಸಲಾಗುವುದು. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಲು ಹೈಸ್ಕೂಲ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ. 

ಈ ತರಗತಿಯನ್ನು 12ರಿಂದ 25 ವರ್ಷಗಳ ಕಾಲ ವಿಜ್ಞಾನ ವಿಭಾಗದ ಕೋಚಿಂಗ್ ನೀಡಿ ಅನುಭವವಿರುವ ನಾಗಾರ್ಜುನ್ ಎಸ್. , ಎಮ್ ವೆಂಕಟೇಶ್ವರ ರೆಡ್ಡಿ, ವಿ. ರಾಜಕುಮಾರ ರೆಡ್ಡಿ, ವಿ ವರುಣ್ ಕುಮಾರ್ ಮತ್ತು ಸಂಪತ್  ಕುಮಾರ್ ಉಪನ್ಯಾಸಕರು ನಡೆಸಲಿದ್ದಾರೆ. ಈ ಅವಕಾಶವನ್ನು ನಗರದ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕೆಂದು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದು, ದಿನಾಂಕ 31-05-2024 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 02-06-2024 ರಂದು ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಲಿಖಿತ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಶಕ್ತಿ ವಿದ್ಯಾ ಸಂಸ್ಥೆಯ ಕಚೇರಿ ಅಥವಾ ಮೊಬೈಲ್ ಸಂಖ್ಯೆ 9686000046/6364875036 ನ್ನು ಸಂಪರ್ಕಿಸಬೇಕಾಗಿ ವಿನಂತಿ.