ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತ್ರಿಪುರ, ನಾಗಾಲ್ಯಾಂಡ್, ಮೇಘಾಲಯಗಳ ಚುನಾವಣಾ ದಿನಾಂಕ ಘೋಷಣೆ ಮಾಡಿದರು.

ತ್ರಿಪುರದಲ್ಲಿ ಫೆಬ್ರವರಿ 16ರಂದು ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಫೆಬ್ರವರಿ 17ರಂದು ಮತದಾನ ನಡೆಯಲಿದೆ. ಈಗಿಂದಲೇ ಚುನಾವಣಾ ನೀತಿಸಂಹಿತೆ ಜಾರಿಯಾದುದಾಗಿ ಹೇಳಿದ ಅವರು ಶಾಂತಿಯುತ ಚುನಾವಣೆಗೆ ಮನವಿ ಮಾಡಿದರು.