ಉಜಿರೆ: ದಶಲಕ್ಷಣ ಪರ್ವದ ಸಂದರ್ಭದಲ್ಲಿ ಪರಿಶುದ್ಧ ಮನ, ವಚನ, ಕಾಯದಿಂದ, ಶ್ರದ್ಧಾ-ಭಕ್ತಿಯಿಂದ ದೇವರ ಪೂಜೆ, ಆರಾಧನೆ, ಧ್ಯಾನ ಮಾಡಿದರೆ ಆತ್ಮನಿಗಂಟಿದ ಪಾಪಕರ್ಮಗಳ ಕೊಳೆ ಕಳೆದು ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿ ಮಾಡಬಹುದುಎಂದು ಪೂಜ್ಯಆರ್ಯಿಕಾಚಿಂತನಮತಿ ಮಾತಾಜಿ ಹೇಳಿದರು.
ಅವರು ಭಾನುವಾರ ನಾರಾವಿ ಬಸದಿಯಲ್ಲಿ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಸನ್ನಿಧಿಯಲ್ಲಿ ದಶಲಕ್ಷಣ ಪರ್ವದ ಅಂಗವಾಗಿ ನಡೆದ ಅನಂತ ನೋಂಪಿಯಲ್ಲಿ ಆಶೀರ್ವಚನ ನೀಡಿದರು.
ನಾರಾವಿ ಪರಿಸರದ 15 ಮಂದಿ ಶ್ರಾವಕ-ಶ್ರಾವಕಿಯರು ಅನಂತ ನೋಂಪಿಯಲ್ಲಿ ಭಾಗವಹಿಸಿದರು.
ಸಕಲ ಪಾಪಕರ್ಮಗಳಿಂದ ಬಿಡುಗಡೆಯಾದಾಗ ಆತ್ಮನೇ ಪರಮಾತ್ಮನಾಗಬಲ್ಲ ಎಂದು ಮಾತಾಜಿ ಹೇಳಿದರು
ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚ್ಯನ ಮತ್ತು ಬ್ರಹ್ಮಚರ್ಯ ಎಂಬ ದಶ ಧರ್ಮಗಳು ಆತ್ಮನ ಸಹಜ ಗುಣಗಳಾಗಿವೆ. ಆದರೆ ಆತ್ಮನಿಗಂಟಿದ ಪಾಪ ಕರ್ಮಗಳಿಂದ ಅವು ಪ್ರಕಟವಾಗುವುದಿಲ್ಲ. ನಿತ್ಯವೂ ದಶಧರ್ಮಗಳ ಪಾಲನೆಯಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ. ಆಗ ಆತ್ಮಕಲ್ಯಾಣದೊಂದಿಗೆ ಲೋಕ ಕಲ್ಯಾಣವೂ ಆಗುತ್ತದೆ. ಎಲ್ಲೆಲ್ಲೂ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಮಾತಾಜಿ ಅಭಿಪ್ರಾಯ ಪಟ್ಟರು.
ಸುಶ್ರೇಯಮತಿ ಮಾತಾಜಿ ಆಶಿವರ್ಚನ ನೀಡಿದರು.
ಕ್ಷಮಾವಳಿ: ಹತ್ತು ದಿನಗಳಲ್ಲಿ ದಶಧರ್ಮಗಳ ಆಚರಣೆ ಬಳಿಕ ಜೈನ ಸಂಪ್ರದಾಯದಂತೆ ಸೋಮವಾರ ಕ್ಷಮಾವಳಿ ಆಚರಿಸಲಾಯಿತು.
ದಶಧರ್ಮಗಳ ಪವಿತ್ರ ಭಾವವು ವಾಣಿಯಲ್ಲಿ ಪ್ರಕಟವಾಗುವುದು “ಕ್ಷಮಾವಳಿ”. “ಎಲ್ಲಾ ಜೀವಿಗಳನ್ನು ನಾನು ಕ್ಷಮಿಸುತ್ತೇನೆ. ಎಲ್ಲಾ ಜೀವಿಗಳು ನನ್ನನ್ನು ಕ್ಷಮಿಸಲಿ. ಸಕಲ ಜೀವಿಗಳೊಡನೆ ನನ್ನ ಮೈತ್ರಿಭಾವಇರಲಿ”ಎಂದು ರಾಜ್ಯದೆಲ್ಲೆಡೆ ಜೈನರು ಸೋಮವಾರ ಕ್ಷಮಾವಳಿ ಆಚರಿಸಿದರು.ಮೌಖಿಕವಾಗಿ, ಪತ್ರಗಳ ಮೂಲಕ ದೂರÀವಾಣಿಗಳ ಮೂಲಕ, ಸಂಚಾರಿದೂರವಾಣಿ ಸಂದೇಶಗಳ ಮೂಲಕವೂ ಕ್ಷಮಾವಳಿ ಆಚರಿಸಲಾಗಿದೆ.\