ಡಿಜಿಟಲ್ ವಿದ್ಯುತ್ ಮೀಟರ್ ಅಳವಡಿಕೆಯ ಈ ಕಾಲದಲ್ಲೂ ಕೂಡಾ ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ತಿಳಿವಳಿಕೆಯ ಉದ್ದೇಶದಿಂದ ಗ್ರಾಹಕ ವಿದ್ಯುತ್ ಪಾಸ್ ಪುಸ್ತಕದ ಜಾರಿ ಅತ್ಯಾಗತ್ಯವಾಗಿದೆ. ಇ ಮಾಪಕದ ತಿಳಿವಳಿಕೆಯ ಕೊರತೆಯ ಗ್ರಾಹಕ, ಪಾಸ್ ಪುಸ್ತಕದ ಕಾರಣ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ .ಇಂತಹ ಪಾಸ್ ಪುಸ್ತಕವು ಪ್ರಸ್ತುತ ವಿದ್ಯುತ್ ಕಂಪೆನಿಗಳು ನೀಡುತ್ತಿರುವ ಅಳಿಸಿಹೋಗುವ,ಸಮರ್ಪಕ ಮುದ್ರಣ ರಹಿತ ಬಿಲ್ಲುಗಳಿಗೆ ಪರ್ಯಾಯವಾಗಿಯೂ ಉಪಯೋಗವಾಗುತ್ತದೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗರದಲ್ಲಿ ಕ್ರಿಯೇಟ್ ಸಂಸ್ಥೆಯ ಸ್ಥಾಪಕ ನಿರ್ದೇಶಕ ವೈ. ಜಿ. ಮುರಳೀಧರನ್ ರವರು ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ ಕ್ರೋಡೀಕರಿಸಿ ತಿಳಿಸಿದರು.
ರಾಜ್ಯ ವಾಪ್ತಿಯ ಸಂಪನ್ಮೂಲ ವ್ಯಕ್ತಿಗಳು ಬೆಂಗಳೂರಿನ ಬಸವನಗುಡಿಯ ಬಿ. ಎಂ. ಎಸ್. ಲಾ ಕಾಲೇಜಿನಲ್ಲಿ 18-0921 ರಂದು ನಡೆದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಹಲವಾರು ವಿಚಾರಗಳನ್ನು ಪ್ರಸ್ತುತಪಡಿಸಿದರು. ವಿದ್ಯುತ್ ನ ಎಲ್ಲಾ ಕಂಪೆನಿಗಳು ನೀಡುವ ವಿದ್ಯುತ್ ಬಿಲ್ಲು ಕಳಪೆ ಗುಣಮಟ್ಟದ ಕಾಗದ,ಮುದ್ರಣಕ್ಕೆ ಹೆಸರುವಾಸಿ. ಅವುಗಳಲ್ಲಿ ಸ್ಥಳೀಯ ಅಭಿಯಂತರ,ತಕ್ಷಣ ಪರಿಹಾರ ನೀಡುವವರ ಸಂಪರ್ಕ, ವಿಳಾಸ, ಇತ್ಯಾದಿ ಯಾವುದೂ ಲಭ್ಯವಿರುವುದಿಲ್ಲ. ಇದೆಲ್ಲ ಲಭ್ಯವಾಗಿ ತಕ್ಷಣ ಪರಿಹಾರ ಸಿಗಬೇಕುಯೆಂಬ ಅಭಿಪ್ರಾಯ ವ್ಯಕ್ತವಾಯಿತು. ಮನೆಯ ಮೀಟರ್ ತನಕದ ಗುಣಮಟ್ಟದ ವಾಯರಿಂಗನ್ನು ಸೂಕ್ತ ಪ್ಲಾಸ್ಟಿಕ್ ಪೈಪ್ ಹಾಕಿ ಸ್ವತಃ ಇಲಾಕೆ ರಸ್ತೆ ಯಡಿಯ ಸಂಪರ್ಕವನ್ನು ನಿರ್ವಹಿಸುವಂತಾಗಬೇಕು. ರಾತ್ರೆ ಗಂಟೆ 10 ರಿಂದ ಬೆಳಗ್ಗೆ ಗಂಟೆ 6 ತನಕ ಕಡಿಮೆ ವಿದ್ಯುತ್ ಶುಲ್ಕವನ್ನು ನಿಗದಿ ಪಡಿಸಿ ನಿಗದಿತ ಪೂರ್ವ ಶುಲ್ಕ ನೀಡಿದ ಮೀಟರನ್ನು ಗ್ರಾಹಕ ಸ್ನೇಹಿಯಾಗಿ ಅಳವಡಿಸಬೇಕು. ಮಾತ್ರವಲ್ಲ ಮೊದಲೇ ಶುಲ್ಕ ಕಟ್ಟಿದ ಹಾಗೂ ಎಲ್ಲ ಗ್ರಾಹಕರ ಅನುಕೂಲಕ್ಕಾಗಿ ವಿದ್ಯುತ್ ಗ್ರಾಹಕ ಪಾಸ್ ಪುಸ್ತಕ ಪ್ರತಿ ಗ್ರಾಹಕರಿಗೂ ನೀಡಲ್ಪಡಬೇಕು. ಅದರಲ್ಲಿ ವಿದ್ಯುತ್ ಅದಾಲತ್ ಪ್ರತೀ ತಿಂಗಳು ನಡೆಯುವ ನಿರ್ದಿಷ್ಟ ದಿನಾಂಕ , ಸ್ಥಳೀಯ ವಿದ್ಯುತ್ ವಿತರಣಾ ಸಂಸ್ಥೆಯ ವಿವರ, ಕುಂದು ಕೊರತೆ ನಿವಾರಣಾ ಅಥವಾ ಪರಿಹಾರ ಸಂಖ್ಯೆಗಳು, ವಿದ್ಯುತ್ ಓಂಬುಡಸಮನ್ ಮಾಹಿತಿ, ಪ್ರತಿ ತಿಂಗಳ ವಿದ್ಯುತ್ ಬಿಲ್ಲು ಮಾಹಿತಿ ಎಲ್ಲವೂ ಸಂಗ್ರಹವಾಗಿ ದೊರಕುವಂತಿರಬೇಕು.
ದೇಶದಲ್ಲಿರುವ ಬೇಡುವವರಿಂದ ಹಿಡಿದು ಪ್ರತಿಯೊಬ್ಬರೂ ನೀಡುವ ತೆರಿಗೆ, ಜಿ. ಎಸ್. ಟಿ. ಗಳಿಂದಾಗಿ ನಾವು ಸಬ್ಸಿಡಿಯ ವಿದ್ಯುತನ್ನು ಪಡೆಯುತ್ತಿದ್ದೇವೆ. ಹೀಗಾಗಿ ಕೃಷಿ ಜಮೀನಿಗೆ ಉಚಿತ ವಿದ್ಯುತ್ ಒದಗಿಸಿದರೂ ಕೂಡ ಅದಕ್ಕೊಂದು ಮಾಪಕ ಅವಶ್ಯವಾಗಿ ಆಳವಡಿಸುವಂತೆ ಆಗಬೇಕು. ಉಚಿತವಾದರೂ ಅಳೆಯುವ, ದಾಖಲಿಸುವ ಪದ್ಧತಿ ಬೆಳೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳ ನೂರಾರು ಕೋಟಿ ರೂಪಾಯಿಯನ್ನು ಸರಕಾರ ತತ್ ಕಾಲ ಬಿಡುಗಡೆಗೊಳಿಸಿದಲ್ಲಿ ವಿದ್ಯುತ್ ಕಂಪೆನಿಗಳು ಲಾಭದತ್ತ ಮುಖ ಮಾಡಲು ಸಾದ್ಯವಿದೆ ಎಂದು ನೆನಪಿಸಲಾಯಿತು.
ಕಾರ್ಯಗಾರದಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಬಿ. ಎಮ್. ಎಸ್. ಲಾ ಕಾಲೇಜಿನ ಪ್ರಾಚಾರ್ಯಾ ಡಾ। ಅನಿತಾ, ಡಾ| ಗಾಯತ್ರಿ, ಡಾ| ಮಂಜುನಾಥ, ಮೈಸೂರು ಸೋಮಶೇಕರ, ಮಂಗಳೂರು ರಾಯೀ ರಾಜ ಕುಮಾರ್ ಮೂಡುಬಿದಿರೆ, ಶಿವಮೊಗ್ಗದ ನಾಗರಾಜ್, ತಿಪ್ಪೇಸ್ವಾಮಿ, ಧಾರವಾಡದ ಸುಜಾತ, ರಾಜಾ ರಾವ್, ಉಮಾಪತಿ, ಕೆ. ಎಸ್. ನಾಗಮಣಿ, ಇತ್ಯಾದಿ ಯವರು ಚರ್ಚೆಯಲ್ಲಿ ಭಾಗವಹಿಸಿ ಅಭಿಪ್ರಾಯಗಳನ್ನು ಮಂಡಿಸಿದರು .