ಆಂಧ್ರ ಪ್ರದೇಶದ ಜಿಲ್ಲಾ ಪರಿಷತ್ ಮತ್ತು ಮಂಡಲ ಪರಿಷತ್‌ಗಳಿಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಭಾರೀ ಜಯ ಸಾಧಿಸಿದೆ.

ಜಿಲ್ಲಾ ಪರಿಷತ್‌ನ 515ರಲ್ಲಿ 502 ಸ್ಥಾನಗಳನ್ನು ವೈಎಸ್‌ಆರ್ ಕಾಂಗ್ರೆಸ್ ಗೆದ್ದುಕೊಂಡಿತು. ತೆಲುಗು ದೇಶಂ ಪಕ್ಷ ಬರೇ 6 ಸ್ಥಾನ ಗೆದ್ದಿದೆ. ಮಂಡಲ ಪಂಚಾಯತ್‌ನ 5,998 ಸ್ಥಾನಗಳು ವೈಎಸ್‌ಆರ್ ಕಾಂಗ್ರೆಸ್ ಪಾಲಾಗಿದೆ. ತೆಲುಗು ದೇಶಂ 826 ಸ್ಥಾನಗಳನ್ನು ಗೆದ್ದಿದೆ. ಮಾಜೀ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕುಪ್ಪಂ ಕ್ಷೇತ್ರದಲ್ಲೂ ವೈಎಸ್‌ಆರ್ ಕಾಂಗ್ರೆಸ್ ಜಯ ಸಾಧಿಸಿದೆ.