ಸೋಮವಾರ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಡಯಟ್- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಕಚೇರಿಗೆ ಬಂದ ಅಪರಿಚಿತನೊಬ್ಬ ಉಪನ್ಯಾಸಕಿಯೊಬ್ಬರ ಹೆಸರು ಹೇಳಿ, ಅವರಿಗೆ ಗಿಫ್ಟ್ ಇದೆ ಎಂದ. ಕ್ಷಣದಲ್ಲಿ ಚೀಲದಿಂದ ಮಚ್ಚು ತೆಗೆದು ಅಲ್ಲಿದ್ದ ಮಹಿಳಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾನೆ.
ಅವರು ಕೂಗಿಕೊಂಡುದರಿಂದ ರಸ್ತೆಯಲ್ಲಿದ್ದ ಪೋಲೀಸರು ಮತ್ತು ಸಾರ್ವಜನಿಕರು ಓಡಿ ಬಂದು ಆರೋಪಿಯನ್ನು ಹಿಡಿದರು. ಅಲ್ಲಿಯ ಹಳೆಯ ವಿದ್ಯಾರ್ಥಿ ಎನ್ನುವ ಅಪರಿಚಿತ ಆರೋಪಿಯ ವಿಚಾರಣೆ ನಡೆಯಬೇಕಾಗಿದೆ.
ಗಾಯಗೊಂಡ ಸಿಬ್ಬಂದಿಗಳು ನಿರ್ಮಲಾ, ರೀನಾ ಮತ್ತು ಗುಣವತಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ.