ರಶಿಯಾದ ಪೆರ್ಮ್ ಸ್ಟೇಟ್ ವಿಶ್ವವಿದ್ಯಾನಿಲಯದ ಮೊದಲ ಮಹಡಿಗೆ ನುಗ್ಗಿದ ಅಪರಿಚಿತ ಬಂದೂಕುದಾರಿ ಮನಬಂದಂತೆ ಗುಂಡು ಹಾರಿಸಿದ್ದರಿಂದ 8 ಜನ ವಿದ್ಯಾರ್ಥಿಗಳು ಸಾವಿಗೀಡಾದರು ಹಾಗೂ ಹಲವರು ಗಾಯಗೊಂಡರು.
ಪೋಲೀಸರು ಆಗಮಿಸುವುದನ್ನು ಕಂಡ ಅಪರಿಚಿತ ಬಂದೂಕುದಾರಿ ತನಗೆ ತಾನೇ ಗುಂಡು ಹಾರಿಸಿಕೊಂಡು ತಾಕೊಲೆ ಮಾಡಿಕೊಂಡಿದ್ದಾನೆ.
ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಒಂದನೇ ಮಹಡಿಯಿಂದ ಕೆಳಕ್ಕೆ ಜಿಗಿಯುತ್ತಿರುವ ವೀಡಿಯೋ ವೈರಲ್ ಆಗಿದೆ.