ಮೂಡುಬಿದಿರೆ: ಉತ್ತಮ ಬ್ರಹ್ಮ ಚರ್ಯ ದಿನವಾದ ಇಂದು 19.9.2021ರಂದು ಅಪಾರಹ್ನ 3.00ಗಂಟೆ ಗೆ 108 ದಿವ್ಯ ಸಾಗರ ಮುನಿರಾಜ್ ರ ಪಾವನ ಸಾನಿಧ್ಯ ದಲ್ಲಿ ಮೂಡು ಬಿದಿರೆ ಗುರುಗಳ ಬಸದಿಯಲ್ಲಿ ಭಗವಾನ್ ಪಾರ್ಶ್ವನಾಥ್ ಸ್ವಾಮಿ, ಅನಂತ ನಾಥ ಸ್ವಾಮಿ ಅಭಿಷೇಕ ಅನಂತ ಚತುರ್ದಶಿ ನಿಮಿತ್ತ ವಿಶೇಷ ಪೂಜೆ, ಸಿದ್ದರ ಅಭಿಷೇಕ ನೆರವೇರಿತು.
ಆಶೀರ್ವಾದ ನೀಡಿದ ಮುನಿ ವರ್ಯರು ಬ್ರಹ್ಮ ಅಂದರೆ ಜ್ಞಾನ ಆತ್ಮಿಕಾ ಜ್ಞಾನ ವಿರಕ್ತಿ ಮೊದಲು ಅಂತರಂಗ ದಲ್ಲಿ ಉಂಟಾದಾಗ ಮಾತ್ರ ಸನ್ಯಾಸ ದೀಕ್ಷೆ ಸಾಧ್ಯ ಧರ್ಮವು ರತ್ನತ್ರಯ ಧರ್ಮವಾಗಿದೆ. ಧರ್ಮ ಎಲ್ಲ ಜೀವಗಳ ರಕ್ಷಣೆಯಾಗಿದೆ. ಧರ್ಮವು ಕ್ಷಮಾದಿ ಭಾವನೆಗಳ ದೃಷ್ಟಿಯಿಂದ ದಶವಿಧವಾಗಿದೆ. ಕೊನೆಯ ಈ ದಶ ಧರ್ಮಗಳ ಆರಾಧನೆಯೇ ದಶಲಕ್ಷಣ ಪರ್ವದ ಪರಮ ಲಕ್ಷ್ಯವಾಗಿದೆ ಎಂದು ನುಡಿದರು.
ಬೆಳಿಗ್ಗೆ ಶ್ರೀ ಮಠದಲ್ಲಿ ಬಿoದು ಶರದ್ ಶೆಟ್ಟಿ ವತಿಯಿಂದ ಪಾರ್ಶ್ವ ನಾಥ ಸ್ವಾಮಿ ಗೆ ಪಂಚಾಮೃತ ಅಭಿಷೇಕ ದಶ ಲಕ್ಷಣ ಪೂಜೆ ಜರುಗಿತು.
ಆಶೀರ್ವಾದ ನೀಡಿದ ಸ್ವಸ್ತಿಶ್ರೀ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಧರ್ಮದ ಆ ದಶ ಲಕ್ಷಣಗಳು ಉತ್ತಮ ಕ್ಷಮೆ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ. ತಪ, ತ್ಯಾಗ, ಆಕಿಂಚನ್ಯ ಹಾಗೂ ಬ್ರಹ್ಮಚರ್ಯ - ಇವು ಹತ್ತು ಧರ್ಮಗಳಾಗಿವೆ.
ಈ ಒಂದೊಂದು ಧರ್ಮಗಳು ಪರ್ವದ ಒಂದೊಂದು ದಿನಗಳಿಗೆ ಮೀಸಲಾಗಿದೆ.
ಆ ದಿನ ಆಯಾ ಧರ್ಮದ ಸ್ವಭಾವ ಹಾಗೂ ಅದನ್ನು ಕೆಡಿಸುವ ವಿಭಾವದ ಬಗ್ಗೆ ಚರ್ಚಿಸಲಾಗುವುದು. ಧರ್ಮದ ಈ ಲಕ್ಷಣಗಳನ್ನು ತಿಳಿಯುವುದರ ಮೂಲಕ ಧರ್ಮ(ಎಂದರೆ ಆತ್ಮಧರ್ಮ)ವನ್ನು ಅರಿಯಲು ಪ್ರಯತ್ನಿಸಲಾಗುವುದುಒಂದು ವರ್ಷ ಕ್ಕೆ ಒಂದು ಬಾರಿ ಯಾದರೊ ಜ್ಞಾನಿಗಳು ಈ ಪರ್ವದ ಪ್ರಯೋಜನ.ಪಡೆ ಯಲು ಪ್ರಯತ್ನ ಮಾಡುವ ಪರ್ವ ಆ ದಿನ ಆಯಾ ಧರ್ಮದ ಸ್ವಭಾವ ಹಾಗೂ ಅದನ್ನು ಕೆಡಿಸುವ ವಿಭಾವದ ಬಗ್ಗೆ ಚರ್ಚಿಸಲಾಗುವುದು. ಧರ್ಮದ ಈ ಲಕ್ಷಣಗಳನ್ನು ತಿಳಿಯುವುದರ ಮೂಲಕ ಚೈತನ್ಯ ರೂಪಿ ಶುದ್ಧ ಆತ್ಮ ಧರ್ಮವನ್ನು ಅರಿಯಲು ಪ್ರಯತ್ನ ಎoದು ನುಡಿದರು. ಕಳೆದ ಹತ್ತು ದಿನಗಳಲ್ಲಿ ಇಂತಹ ವಿಚಾರ ಚಿಂತನ ಮಂಥನ ಶ್ರೀ ಜೈನ ಮಠ ಹಾಗೂ ಗುರು ಗಳ ಬಸದಿ ಯಲ್ಲಿ ಜರುಗಿತು
ಕಾರ್ಯಕ್ರಮದಲ್ಲಿ ಶ್ರೀ ಕೆ ಅಭಯ ಚಂದ್ರ ಜೈನ್, ದಿನೇಶ್ ಕುಮಾರ್,ಮುಕ್ತೇಸರರು, ಸನತ್ ಕುಮಾರ್, ಚಕ್ರೆಶ್ ಅರಿಗಾ, ವೀರೇಂದ್ರ ಕಂಬ್ಳಿ, ಶ್ರೀ ಸಂಜಯಂಥ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
20.09.21 ರಂದು ಸಾಮೂಹಿಕ ಕ್ಷಮೆ ಯಾಚಿಸುವ ಕ್ಷಮಾ ವಳಿ ಶ್ರೀ ಮಠ ದಲ್ಲಿ ಸಂಜೆ 5.00 ಗಂಟೆ ಗೆ ವಾರ್ಷಿಕ ಸಂವತ್ಸ ರಿ ಪ್ರತಿ ಕ್ರಮಣ ದೊಂದಿಗೆ ಜರುಗಲಿದೆ