ರಾಷ್ಟ್ರ ಮಟ್ಟದಲ್ಲಿ ಪ್ರಥಮ rank ಗಳಿಸಿದ ರೂತ್ ರವರ ಮನೆಗೆ ಎಐಸಿಸಿ ಕಾರ್ಯದರ್ಶಿ ಐವನ್ ಡಿ ಸೋಜ ರವರ ನೇತೃತ್ವದ ತಂಡ ತೆರಳಿ, ರೂತ್ ರವರಿಗೆ ಸನ್ಮಾನಿಸಲಾಯಿತು ಮತ್ತು ಮುಂದೆ ಚಾರ್ಟೆಡ್ ಅಕೌಂಟೆಂಟ್ ಆಗಿ ಬರಲು ಉತ್ತೇಜಿಸುವ ಜೊತೆಗೆ ಯುಪಿಎಸ್ ಸಿ ಮೂಲಕ ಐಎಎಸ್ ಪದವಿ ಗಳಿಸಿ, ದೇಶ ಸೇವೆಗೆ ಮುಂದಾಗಬೇಕೆಂದು ಸಲಹೆ ನೀಡಿದರು ಮತ್ತು ರೂ ತ್ ರವರು ಮಾತನಾಡಿ, ತನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಐ ಎ ಎಸ್ ಮಾಡುವ ಇರಾದೆಯನ್ನು ನೇರವೇರಿಸುವುದಾಗಿ ನುಡಿದರು. ಈ ಸಂದರ್ಭದಲ್ಲಿ ಅವರ ತಂದೆ ತಾಯಿ ಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಹಾಗೂ ಕಾರ್ಪೊರೇಟರ್ ಶಶಿಧರ ಹೆಗಡೆ, ಕಾರ್ಪೊರೇಟರ್ ನವೀನ್ ಡಿಸೋಜ, ಮಾಜಿ ಕಾರ್ಪೊರೇಟರ್ ಡಿಕೆ ಅಶೋಕ್, ಭಾಸ್ಕರ್ ರಾವ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ,ಆಶಿತ್ ಪಿರೇರಾ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಐವನ್ ಡಿಸೋಜ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ದೀಕ್ಷಿತ್ ಅತಾವರ, ಜೇಮ್ಸ್ ಪ್ರವೀಣ್, ಮೀನಾ ಟೆಲ್ಲಿಸ್, ಪಿಯುಸ್ ಮೊಂತೇರೋ, ಬಾಸಿಲ್ ರೋಡ್ರಿಗಸ್, ಆನಂದ್ ಸೋನ್ಸ್, ಸತೀಶ್ ಪೇಂಗಲ್, ಗಂಗಾಧರ್, ವಿಕಾಸ್ ಶೆಟ್ಟಿ, ಹಬೀಬುಲ್ಲಾ ಕನ್ನೂರು ಮುಂತಾದವರು ಉಪಸ್ಥಿತರಿದ್ದರು.