ಸಿಇಟಿ ತಾಂತ್ರಿಕ ಶಿಕ್ಷಣ ಪ್ರವೇಶ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಹತ್ತರಲ್ಲಿ ಒಂಬತ್ತು ರಿಯಾಂಕ್ ಪಡೆದ ಸಾಧನೆ ಮಾಡಿದ್ದಾರೆ.

ಎಕ್ಸ್‌ಪರ್ಟ್ 6, ಎಕ್ಸಲೆಂಟ್ 2, ಆಳ್ವಾಸ್ 1 ರಿಯಾಂಕ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿವೆ.

ಮೈಸೂರಿನ ಮೇಘನ್ ಎಚ್. ಕೆ. ಎಂಬ ವಿದ್ಯಾರ್ಥಿ ಐದು ವಿಭಾಗಗಳಲ್ಲಿ ಪ್ರಥಮ ರಿಯಾಂಕ್ ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ.