ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರು ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ರಾಜ್ಯದಲ್ಲಿ 29.91% ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 49.48% ಹಾಗೂ ಉಡುಪಿ ಜಿಲ್ಲೆಯಲ್ಲಿ 35.79% ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಕರಾವಳಿಗೆ ಹಿರಿಮೆ ತಂದಿದ್ದಾರೆ.
ಯಥಾಪ್ರಕಾರ ಹುಡುಗಿಯರು ಒಟ್ಟಾರೆ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 18,413 ವಿದ್ಯಾರ್ಥಿಗಳಲ್ಲಿ 5,507 ಮಂದಿ ಪಾಸಾಗಿದ್ದಾರೆ. ನೇರ ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆದ 592 ಜನರಲ್ಲಿ 556 ಮಂದಿ ಪಾಸಾಗಿದ್ದಾರೆ. ಪುನರಾವರ್ತಿತ 351 ವಿದ್ಯಾರ್ಥಿಗಳಲ್ಲಿ 183 ಮಂದಿ ತೇರ್ಗಡೆ ಕಂಡಿದ್ದಾರೆ.