ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎಂಟು ರಾಜ್ಯಗಳ ರಾಜ್ಯಪಾಲರ ನೇಮಕಕ್ಕೆ ಅಂಕಿತ ಹಾಕಿದ್ದಾರೆ. ಇವರಲ್ಲಿ ಕೆಲವು ಹೊಸ ನೇಮಕವಾದರೆ ಕೆಲವು ಬದಲಾವಣೆ ಮಾಡಿದ್ದಾಗಿದೆ.
ಮಿಜೋರಾಂ ರಾಜ್ಯಪಾಲ ಎಸ್. ಪಿ. ಶ್ರೀಧರನ್ ಪಿಳ್ಳೈ ಅವರನ್ನು ಗೋವಾಕ್ಕೆ, ಹರಿಯಾಣದ ರಾಜ್ಯಪಾಲ ಸತ್ಯದೇವ ನಾರಾಯಣ ಅವರನ್ನು ತ್ರಿಪುರಾಕ್ಕೆ, ತ್ರಿಪುರಾದ ರಾಜ್ಯಪಾಲ ರಮೇಶ್ ಬೈಸ್ ಅವರನ್ನು ಜಾರ್ಖಂಡ್‌ಗೆ, ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಹರಿಯಾಣಕ್ಕೆ, ಕೆ. ಹರಿಬಾಬು ಅವರನ್ನು ಮಿಜೋರಾಮ್‌ಗೆ, ಮಂಗುಭಾಯಿ ಚಗನ್‌ಭಾಯಿ ಪಟೇಲ್ ಅವರನ್ನು ಮಧ್ಯ ಪ್ರದೇಶಕ್ಕೆ, ರಾಜೇಂದ್ರ ವಿಶ್ವನಾಥ ಅರಳೇಕರ್ ಅವರನ್ನು ಹಿಮಾಚಲ ಪ್ರದೇಶಕ್ಕೆ, ತಾವರ್‌ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕಕ್ಕೆ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.