ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಇದುವರೆಗೆ ಕಾರ್ಯದರ್ಶಿಯಾಗಿ, ಸ್ವತಃ ಪ್ರತೀ ವರ್ಷ ನೂತನ ವಾಹನದಲ್ಲಿ ಗಣೇಶನ ಚಾಲಕರಾಗಿದ್ದ ಉದ್ಯಮಿ ನಾರಾಯಣ ಪಿಎಂ ರವರು ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ರಾಜಾರಾಮ್ ಹಾಗೂ ಕೊರಗ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಯ ದ.ಕ.ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಎಂ, ಕಾರ್ಯದರ್ಶಿಯಾಗಿ ಗಂಗಾಧರ ಎಂ, ಕೋಶಾಧಿಕಾರಿಯಾಗಿ ಚೇತನ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಇದುವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಉದ್ಯಮಿ ಶ್ರೀಪತಿ ಭಟ್ ರವರ ಸಮರ್ಥ ಕಾರ್ಯನಿರ್ವಹಣೆಯನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದರು.