ನಿಟ್ಟೆ, ಕಾರ್ಕಳ: ಆಗಸ್ಟ್ 05 ರಂದು ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜು ನಿಟ್ಟೆ ಇದರ 38ನೇ ವಿದ್ಯಾರ್ಥಿ ಪರಿಷತ್ ಅನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ಸಹಯೋಗಗಳ ನಿರ್ಧೇಶಕರಾದ ಪ್ರೋ. ಹರೀಕೃಷ್ಣ ಭಟ್ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೋ. ಹರೀಕೃಷ್ಣ ಭಟ್ ವಿದ್ಯಾರ್ಥಿಗಳು ಮಹತ್ವಾಕಾಂಕ್ಷಿಗಳಾಗಿರಬೇಕು ಹಾಗೂ ಗುರಿ ಮುಟ್ಟುವ ಹಸಿವಿರಬೇಕು ಆಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು, ಜಾಗತಿಕವಾಗಿ ಇಳಿಕೆಯಾಗುತ್ತಿರುವ ಯುವಜನತೆಯ ಪ್ರಮಾಣವು ಭಾರತೀಯ ಯುವಜನತೆಗೆ ವಿಫುಲವಾದ ಉದ್ಯೋಗ- ಅವಕಾಶವನ್ನು ಒದಗಿಸಿಕೊಡುತ್ತಿದೆ ಅದನ್ನು ವಿದ್ಯಾರ್ಥಿಗಳು ಬಳಸಿಕೊಂಡು ವಿದೇಶಗಳಲ್ಲಿ ಉದ್ಯೋಗವನ್ನು ಪಡೆಯಬೇಕು ಎಂದು ತಿಳಿಸಿದರು,
ಜೊತೆಗೆ ಜಪಾನ್ ಅಲ್ಲಿನ ಉಧ್ಯಮಶೀಲತೆ ಮತ್ತು ಔಧ್ಯೋಗಿಕ ಮಾನಸಿಕತೆಯ ಬಗ್ಗೆ ಪರಿಚಯಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರ್ಥ ಮೀಡಿಯ ಗ್ರೂಪ್ ನ ನಿರ್ಧೇಶಕ ಪ್ರಶಾಂತ್ ಎನ್ ಶೆಟ್ಟೆ ಮಾತನಾಡಿ ಭಾರತವನ್ನು ಸಶಕ್ತಗೊಳಿಸಿವ ಶಕ್ತಿ ನಮ್ಮ ಯುವಜನತೆಯ ಕೈಯಲ್ಲಿದೆ ಹೇಗೆ ಅಮೇರಿಕಾವನ್ನು ಅಲ್ಲಿಯ ದೈತ್ಯ ಕಂಪೆನಿಗಳು ರೂಪಿಸಿದವೋ ಅದೇ ಮಾದರಿಯಲ್ಲಿ ಭಾರತವೂ ಸಾಗಬೇಕು ಆಗ ಮಾತ್ರ ದೇಶ ಅಭಿವೃದ್ದಿಹೊಂದಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವೀಣಾ ಕುಮಾರಿ ಬಿ.ಕೆ ಮಾತನಾಡಿ ವಿದ್ಯಾರ್ಥಿಗಳು ನಾವು ನಮ್ಮ ಕನಸುಗಳನ್ನು ಬೆನ್ನು ಹತ್ತಬೇಕು, ಹಾಗೂ ಸತತ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸಬೇಕು, ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ದಿಗೆ ಕಾಲೇಜು ಸದಾ ಬೆಂಬಲವಾಗಿ ನಿಲ್ಲುತ್ತದೆ ಅದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ತಿಳಿಸಿದರು, ಹಾಗೆಯೇ ವಿದ್ಯಾರ್ಥಿಗಳು ತಾವು ಬೆಳೆಯುತ್ತಲೇ ಸಾಮಜಿಕ ಕಳಕಳಿ, ಅಸ್ಥೆಗಳನ್ನು ಬೆಳಿಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ವಿವಿಧ ಪಠ್ಯೇತರ ಚಟುವಟಿಕೆಗಳ ಸಂಘಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಪ್ರತಿಜ್ಞಾ ವಿಧಿ ಭೋದಿಸಿದರು, ವಿದ್ಯಾರ್ಥಿ ಪರಿಷತ್ ಕಾರ್ಯದರ್ಷಿ ಶ್ರೀವತ್ಸ ಭಟ್ ವಿದ್ಯಾರ್ಥಿ ಪರಿಷತ್ ನ ವಾರ್ಷಿಕ ಯೋಜನೆಗಳನ್ನು ಪ್ರಸ್ತಾವಿಸಿದರು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸುಮನ ಎಂ ಕೆ ಅಥಿತಿಗಳನ್ನು ಸ್ವಾಗತಿಸಿದರು, ವಿದ್ಯಾರ್ಥಿ ಪರಿಷತ್ ಸಂಯೋಜಕಿ ರೇಖಾ ವಂಧಿಸಿದರು, ಐಕ್ಯೂಎಸಿ ಸಂಯೋಜಕ ಪ್ರಕಾಶ್ ಮತ್ತು ವಿದ್ಯಾರ್ಥಿ ಪರಿಷತ್ ಸಂಯೋಜಕಿ ಮಾಲಿನಿ ಜೆ ರಾವ್ ವೇಧಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವಿಷಾಕ್ ವಿ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.