ಮಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಬಿಜೆಪಿಯ ದುರ್ಬಲ ಆಡಳಿತದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಯುವಕರಿಗೆ ಉದ್ಯೋಗವಿಲ್ಲ. ದೇಶದ ಆರ್ಥಿಕ ಸ್ಥಿತಿ ಅರಾಜಕತೆ ಕಡೆಗೆ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರತಿ ನಿತ್ಯ ಇಂಧನ ಬೆಲೆ ಏರಿಕೆ ಮಾಡುವ ಮೂಲಕ ಹಗಲು ದರೋಡೆಗೆ ಮಾಡುತ್ತಿದೆ. ಈ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಮಾತನಾಡಿ, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕ್ಕಾರಕ್ಕೆ ಬಂದಾಗಿನಿಂದ ನೋಟ್ ಬ್ಯಾನ್, ಜಿಎಸ್ಟಿಗಳಂತಹ ಕಾನೂನನ್ನು ಜಾರಿಗೆ ತಂದು ಜರನ್ನು ಸಂಕಷ್ಟಕ್ಕೆತಂದೊಡ್ಡಿದೆ. ಇದುವರೆಗೆ ಸರ್ಕಾರ ಅಭಿವೃದ್ಧಿಪರ, ಜನ ಪರ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದಿಲ್ಲ. ಯುಪಿಎ ಸರ್ಕಾರ ಇದ್ದಾಗ ಪೆಟ್ರೋಲ್-ಡೀಸೆಲ್ ದರ 70 ರೂ. ಇದ್ದು, ಆಗ 145 ಡಾಲರ್. ಈಗ 45 ಡಾಲರ್ ಆಗುವಾಗ 100 ರೂ. ಸಮೀಪಿಸಿದೆ. ಬೆಲೆ ಏರಿಕೆಯೇ ಇವರ ಬಹುದೊಡ್ಡ ಸಾಧನೆ. ಕೊರೋನಾ ಸಂದರ್ಭದಲ್ಲಿ ಜನರು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ತೈಲ, ಅನಿಲ, ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಸರ್ಕಾರ  ಬಗ್ಗೆ ಸಂಪೂರ್ಣ ಜವಾಬ್ದಾರಿವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಹಿರಿಯ ಮುಖಂಡ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಜನರಿಗೆ ಅಚ್ಛೇದಿನದ ಆಶ್ವಾಸನ ನೀಡಿ ಅಧಿಕ್ಕಾರ ಹಿಡಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕೊರೋನಾ ಸಂಕಷ್ಟದ ಕಾಲದಲ್ಲೂ ದಿನೇ ದಿನೇ ಡೀಸೆಲ್-ಪೆಟ್ರೋಲ್ ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಜನತೆಗೆ ಮತ್ತಷ್ಟು ತೊಂದರೆ ನೀಡುತ್ತಿದ್ದು, ಸರ್ಕಾರ ವಿರುದ್ಧ ಯುವ ಶಕ್ತಿ ಜಾತಿ-ಬೇಧ ಮರೆತು ಹೋರಾಟ ನಡೆಸಬೇಕಾಗಿದೆ ಎಂದು ಅಭಿಪ್ರಾಯಿಸಿದರು.

 ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಆತ್ಮನಿರ್ಭರತೆಯ ವಿಶ್ವಾಸ ನೀಡಿದ ಕೇಂದ್ರ ಸರಕಾರ ಜನರ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಒಂದು ತಿಂಗಳಲ್ಲಿ ಸರಕಾರ ಹಠಕ್ಕೆ ಬಿದ್ದಾಗೆ 18 ಬಾರಿ ತೈಲಗಳ ಬೆಲೆ ಏರಿಕೆ ಮಾಡಿದೆ. ಜನರ ಶಾಪ ಸರಕಾರಕ್ಕೆ ತಟ್ಟದಿರದು. ಸರಕಾರ ತೈಲ-ಅನಿಲ ಬೆಲೆ, ದಿನಸಿ ವಸ್ತುಗಳ ಬೆಲೆ ಏರಿಸಿ ಬಡ ಜನರ ಹೊಟ್ಟೆ ಮೇಲೆ ಸವಾರಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್,  ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ಸರ್ಫರಾಜ್ ನವಾಝ್, ಆಶಿತ್ ಪಿರೇರಾ,  ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶಬೀರ್ ಎಸ್, ಜಿಲ್ಲಾ ಕಾಂಗ್ರೆಸ್ ಕಛೇರಿ ಕಾರ್ಯದರ್ಶಿ ನಝೀರ್ ಬಜಾಲ್, ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಿರೋಜ್ ಮಲಾರ್, ಆರೀಫ್ ಬಾವಾ, ಯುವ ನಾಯಕರಾದ ನವೀದ್, ಸೌಹಾನ್ ಎಸ್.ಕೆ, ರಮನಂದ್ ಪೂಜಾರಿ, ನವಾಲ್ ಉಪ್ಪಿನಂಗಡಿ, ದೀಕ್ಷಿತ್ ಅತ್ತಾವರ್, ಸಮ್ರಾನ್ ಅಡ್ಡೂರ್, ಅನ್ಸಾರ್ ಪಿಲಿಗುಡು, ರೋಬಿನ್ ಪ್ರೀತಮ್, ಯೋಗೀಶ್ ನಾಯಕ್, ಮೊಹಮ್ಮದ್ ಬಪ್ಪಲಿಗೆ, ಯೋಗೀಶ್ ಕುಮಾರ್, ಮೊಹಮ್ಮದ್ ಯುನುಸ್, ಮೀನಾ ಟೆಲ್ಲಿಸ್, ಹಬೀಬ್ ಕಣ್ಣೂರು, ಶಾಫಿ ಕೈಕಂಬ, ಫಯಾಜ್ ಅಮ್ಮೇಮಾರ್, ಇಮ್ರಾನ್ ಶಾಂತಿಅಂಗಡಿ, ಶಾಹೀದ್ ಉಳ್ಳಾಲ್, ಶೋಯಬ್ ಅಕ್ತರ್, ಅಲ್ಫಾಝ್, ಸುಜಿತ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.