ಜೂನ್ 4ರಿಂದ 6ರವರೆಗೆ ಸತತ ಮೂರು ದಿನವೂ ಪೆಟ್ರೋಲಿಯಂ ಬೆಲೆ ಏರಿಕೆ ಕಂಡುದರಿಂದ ದಾವಣಗೆರೆ ಸಹಿತ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ರೂಪಾಯಿ ನೂರು ದಾಟಿದರೆ ದೇಶದ ಕೆಲವೆಡೆ ಡೀಸೆಲ್‌ ಸಹ ರೂಪಾಯಿ ನೂರು ಮುಟ್ಟಿತು.

ಜೂನ್‌ 4, 5, 6 ತಾರೀಕುಗಳಲ್ಲಿ ಕ್ರಮವಾಗಿ ಪೆಟ್ರೋಲಿಗೆ 29, 14, 24 ಪೈಸೆ ಹಾಗೂ ಡೀಸೆಲ್‌‌ಗೆ 32, 20, 30 ಪೈಸೆ ಏರಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಬಳ್ಳಾರಿ ಬಳಿಕ ದಾವಣಗೆರೆ ಪೆಟ್ರೋಲ್ ದರದಲ್ಲಿ ಸುದ್ದಿ ಮಾಡಿದೆ.