ಪುತ್ತೂರು: ‘ರಿಸರ್ಚ್‍ಇನ್ಫೋರ್ಮೇಟಿಕ್ಸ್ : ಸಂಶೊಧನಾ ವಿಧಾನಶಾಸ್ತ್ರ ಮತ್ತು ಸಂಶೋಧನಾ ಬರಹ’ ವಿಷಯದಲ್ಲಿ ಒಂದು ದಿವಸದ ಕಾರ್ಯಗಾರವನ್ನು ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು, ನ ರಿಸರ್ಚ್‍ಡೆವಲಪ್ ಮೆಂಟ್ಟ್ ಸೆಲ್ಲ್, ಇನ್ಸ್ಟಿಟ್ಯೂಶನ್‍ ಇನ್ನೋವೇಸನ್‍ ಕೌನ್ಸಿಲ್ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಸಹಯೋಗದಲ್ಲಿ ದಿನಾಂಕ 17.05.2025 ರಂದು ಸ್ನಾತಕೋತ್ತರ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಗಾರವನ್ನು ಹೊಸ ಸಂಶೋಧಕರನ್ನು ಉತ್ತೇಜಿಸುವ ಹಾಗೂ ಅದ್ಯಾಪಕರ ಸಂಶೋಧನಾ ಕೌಸಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಪ್ರಾಚಾರ್ಯರಾದ ವಂದನೀಯ ಡಾ.ಆಂಟನಿ ಪ್ರಕಾಶ್ ಮೊಂತೆರೋ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ನಾವು ತಯಾರಾಗದೆ ಇದ್ದರೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಲು ಸಾದ್ಯವಿಲ್ಲ. ಸಂಶೋಧನೆ ವೃತ್ತಿಪರ ಅಗತ್ಯವಷ್ಟೇ ಅಲ್ಲದೆ ವ್ಯಕ್ತಿಗತ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಾಯಕವಾಗಿದೆ, ಎಂದು ಹೇಳಿದರು. 

ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರು ಯಸ್‍ಡಿ ಯಂ ಮ್ಯಾನೇಜ್‍ಮೆಂಟ್‍ ಇನ್ ಸ್ಟಿಟ್ಯೂಟ್ ಆಂಡ್‍ ಡೆವಲಪ್‍ಮೆಂಟ್‍ನ ಸಹಾಯಕ ಪ್ರಾಧ್ಯಾಪಕರಾದ ಡಾ. ಸುನಿಲ್ ಯಂ. ವಿ. ರವರು ಭಾಗವಹಿಸಿದರು. ಅವರು ಈ Foundations of Research Design, Literature Review and Research Gaps, Writing and Disseminating Research ಎಂಬ 3 ಪ್ರಮುಖ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಡಾ. ಸುನಿಲ್ ರವರು ತಮ್ಮ ಸೆಶನ್‍ನಲ್ಲಿ ಸಂಶೋಧಕರು ಸಂಶೋಧನೆಯ ವಿವಿಧ ಹಂತಗಳಲ್ಲಿ ಉಪಯೋಗಿಸಬಹುದಾದ ಉಚಿತವಾಗಿ ಲಭ್ಯವಿರುವ ಎಐ ಉಪಕರಣಗಳಾದ ChatGPT, GradCoach, Perplexity, Jenni, Google Gemini, ಮತ್ತು Manchester Academic Phrasebank ಗಳನ್ನು ಪರಿಚಯಿಸಿದರು. ಈ ಉಪಕರಣಗಳು ಸಂಶೋಧಕರಿಗೆ ಸಮಯ ಉಳಿಸಲು, ಶುದ್ದತೆ ಮತ್ತು ನಿಖರತೆಯನ್ನು ಹೆಚ್ಚಿಸಲು ಮತ್ತು ತಮ್ಮ ಕ್ಷೇತ್ರದ ಇತ್ತೀಚಿನ ಬೆಳವಣಿಗಳನ್ನು ತಿಳಿದುಕೊಳ್ಳಲು ಯಾವ ರೀತಿ ಉಪಾಕಾರಿಯಾಗಿದೆ ಹಾಗೂ ಅವುಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಪ್ರಾಯೋಗಿಕವಾಗಿ ವಿವರಿಸಿದರು.

ಕಾರ್ಯಕ್ರಮವು ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ  ಶಿವಾನಿ ಮಲ್ಲ್ಯಅವರ ಪ್ರಾಥನೆಯೊಂದಿಗೆ ಪ್ರಾರಂಭವಾಯಿತು. ರಿಸರ್ಚ್‍ಡೆವಲಪ್ ಮೆಂಟ್ಟ್ ಸೆಲ್ಲ್ ನಿರ್ದೇಶಕರಾದ ಡಾ. ವಿನಯಚಂದ್ರರವರು ಸ್ವಾಗತಿಸಿ, ಆಯ್ಕೆ ಶ್ರೇಣಿ ಗ್ರಂಥಪಾಲಕರಾದ  ಅಬ್ದುಲ್‍ ರಹ್ಮಾನ್ ಜಿ ರವರು ವಂದಿಸಿದರು. ಗಣಕಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುರಕ್ಷಾರವರು ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಗಾರದಲ್ಲಿ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಉಪಾನ್ಯಾಸಕರು ಮತ್ತು ಸಂಶೋಧಾನಾ ಆಸಕ್ತರು ಭಾಗವಹಿಸಿದರು.