ಕೇಂದ್ರ ಸಚಿವರಾದ ಕ್ರೈಸ್ತ ಸಮುದಾಯದ ರಾಷ್ಟ್ರೀಯ ನಾಯಕರಾದ ಆಸ್ಕರ್ ಫರ್ನಾಂಡೀಸ್ ಇವರು ಕಳೆದ 57 ದಿನಗಳ ಕಾಲ ಅಸ್ವಸ್ಥ ತೆಯಲ್ಲಿದ್ದು ಅವರ ನಿಧಾನವಾದ ನಂತರ  ಅವರ ಅಂತ್ಯ ಸಂಸ್ಕಾರ ನೆರವೇರಿಸಲು ಸಹಕರಿಸಿದ ಕ್ರೈಸ್ತ ಸಮುದಾಯದ ಎಲ್ಲ ಜನರ ಮತ್ತು ಆಸ್ಕರ್ ರವರ ಕುಟುಂಬದ ಪರವಾಗಿ ಇಂದು ಮಂಗಳೂರಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೈ.ರೆ.ಡಾ. ಪೀಟರ್ ಪಾವುಲ್ ಸಲ್ದಾನ ಇವರನ್ನು ಭೇಟಿ ಮಾಡಿ, ಅದೇ ರೀತಿ ಮಿಲಾಗ್ರಿಸ್ ಚರ್ಚಿನ  ಧರ್ಮಗುರುಗಳು ರೆ.ಫಾ.ಭೋನ್ವಿಂಚರ್ ನಜರೆತ್ ಇವರನ್ನು ಭೇಟಿ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಲು ಸಹಕರಿಸಿದ ಎಲ್ಲರಿಗೂ ವಿಶ್ವ ಪರ ಮುಖಾಂತರ ಮಾಜಿ ಶಾಸಕ ಐವನ್ ಡಿಸೋಜಾ ರವರ ನೇತೃತ್ವದಲ್ಲಿ ಭಿಷಪ್ ರವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಉದ್ಯಮಿ ಆಸ್ಕರ್ ಫರ್ನಾಂಡಿಸ್ ಸಂಬಂಧಿ  ವಾಲ್ಟರ್ ಡಿಸೋಜ, ಕಾರ್ಪೊರೇಟರ್ ನವೀನ್ ಡಿಸೋಜ, ಕ್ರೈಸ್ತ ಸಮುದಾಯದ ಮುಖಂಡ ಮಾರ್ಸೆಲ್ ಮೊಂತೆರೋ, ಮಂಗಳೂರು ದ.ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಐವನ್ ಡಿಸೋಜ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಆಶೀತ್ ಪಿರೇರಾ ಉಪಸ್ಥಿತರಿದ್ದರು.