ಮಂಗಳೂರು: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಕೇಂದ್ರ ಮಾಜಿ ಸಚಿವರಾದ ಆಸ್ಕರ್ ಫೆರ್ನಾಂಡಿಸ್ ರವರಿಗೆ ನುಡಿ ನಮನ ಕಾರ್ಯಕ್ರಮ ಇಂದು ತಾ 26.9.2021 ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ ರವರು ದಿ. ಆಸ್ಕರ್ ಫೆರ್ನಾಂಡಿಸ್ ರವರಿಗೆ ನುಡಿ ನಮನ ಸಲ್ಲಿಸುತ್ತಾ,ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲದೆ, ಇತರ ಪಕ್ಷದ ನಾಯಕರು ಕೂಡ ಗೌರವದಿಂದ ಕಾಣುತ್ತಿದ್ದ ಒಬ್ಬ ಸಮರ್ಥ ನಾಯಕ ಇದ್ದರೆ ಅದು ದಿ. ಆಸ್ಕರ್ ಫೆರ್ನಾಂಡಿಸ್ ಮಾತ್ರ. ಆದರೆ ಇದೀಗ ಅವರ ಅಕಾಲಿಕ ಸಾವು ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಅವರ ಮನಸು ಸದಾ ತುಡಿಯುತ್ತಿತ್ತು. ಅವರು ಎಂದಿಗೂ ಮಂತ್ರಿಗಿರಿ ಸ್ಥಾನ ಬೇಕು ಎಂದು ಹಂಬಲಿಸಲಿಲ್ಲ. ಪಕ್ಷದ ವಿವಿಧ ಹಂತಗಳಲ್ಲಿ ದುಡಿದು, ರಾಷ್ಟ್ರೀಯ ಮಟ್ಟದಲ್ಲಿ ಎನ್ ಎಸ್ ಯು ಐ, ಯುವ ಕಾಂಗ್ರೆಸ್, ಇಶಾನ್ಯ ರಾಜ್ಯಗಳ ಜವಾಬ್ದಾರಿ, ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ಎಐಸಿಸಿ ಕಾರ್ಯದರ್ಶಿಯಾಗಿ ದುಡಿದು ಅಪಾರ ಅನುಭವವನ್ನು ಪಕ್ಷಕ್ಕೆ ದಾರೆ ಎರೆದಿದ್ದಾರೆ.
ಈ ದೇಶಕ್ಕೆ ಬೇಕಾಗಿ ಅವರು ತಮ್ಮ ಅರೋಗ್ಯದ ಕಡೆಗೆ ಗಮನಕೊಡದೆ ನಿರಂತರವಾಗಿ ಕೆಲಸ ಮಾಡಿದ ವ್ಯಕ್ತಿ ಎಂದರು. ದಕ್ಷಿಣ ಬ್ಲಾಕ್ ಕಾರ್ಯಾಧ್ಯಕ್ಷ ಹೊನ್ನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲಿಂ, ಪ್ರಭಾಕರ್ ಶ್ರೀಯಾನ್, ಮಹಾಬಲ ಮಾರ್ಲ, ವಿನಯರಾಜ್, ವಿಶ್ವಾಸ್ ದಾಸ್, ನವೀನ್ ಡಿಸೋಜಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊರ್ಪಟರ್ ಗಳಾದ ಅಬ್ದುಲ್ ಲತೀಫ್, ಪ್ರವೀಣ್ ಆಳ್ವ, ಕೇಶವ ಮರೋಳಿ, ಅಶ್ರಫ್ ಬಜಾಲ್, ಪಕ್ಷದ ಪ್ರಮುಖರಾದ ಟಿ. ಕೆ. ಸುಧೀರ್, ಸದಾಶಿವ ಅಮೀನ್, ಅಪ್ಪಿ,ಕವಿತಾ ವಾಸು, ಶಾಂತಲಾ ಗಟ್ಟಿ, ಸದಾಶಿವ ಕುಲಾಲ್, ವಹಾಬ್ ಕುದ್ರೋಳಿ,ರಮಾನಂದ ಪೂಜಾರಿ ಶೈಲಜಾ, ಸುನೀಲ್ ಕುಮಾರ್, ರಾಕೇಶ್ ದೇವಾಡಿಗ, ಉಮೇಶ್ ದೇವಾಡಿಗ,ಯೂಸುಫ್ ಉಚ್ಚಿಲ್, ಇಮ್ರಾನ್,ಸವಾನ್ ಎಸ್. ಕೆ., ಚೇತನ್ ಉರ್ವಾ, ಆಸೀಫ್ ಬೆಂಗ್ರೆ, ಗಣೇಶ ಉರ್ವಾ, ಭಾಸ್ಕರ್ ರಾವ್, ಗೀತಾ ಅತ್ತಾವರ, ಚಂದ್ರ ಕಲಾ, ವಿದ್ಯಾ,ಬಾನೆಟ್ ಡಿ ಮೇಲ್ಲೋ, ಶರತ್ ಬೋಳಾರ್, ಸಮರ್ಥ ಭಟ್, ಯೋಗೇಶ್ ನಾಯಕ್, ಲಕ್ಷ್ಮಣ್ ಶೆಟ್ಟಿ, ದಿನೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.