ಬಾಂಬೆ ಹೈಕೋರ್ಟ್‌ನಲ್ಲಿ ಕೊರೋನಾ ಲಸಿಕೆಗೆ ಏಕರೂಪದ ರೂ. 150 ನಿಗದಿಪಡಿಸುವಂತೆ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿದೆ.

ಮೂವರು ಕಾನೂನು ವಿದ್ಯಾರ್ಥಿಗಳು ಫಯಾಜ್ ಖಾನ್ ಎಂಬ ವಕೀಲರ ಮೂಲಕ ಈ ಪಬ್ಲಿಕ್ ಇಂಟ್ರೆಸ್ಟ್‌ ಲಿಟಿಗೇಶನ್ ಹಾಕಿದ್ದಾರೆ. ಲಸಿಕೆ ದರ ಒಂದು ಚುಚ್ಚುಮದ್ದು ಪಡೆಯಲು ದೇಶದಲ್ಲಿ ಒಂದೇ ದರ ಇರಬೇಕು. ಅಲ್ಲದೆ ಸಾಂಕ್ರಾಮಿಕವನ್ನು ಅತಿ‌ ಲಾಭಕ್ಕೆ ಬಳಸುವುದು ತರವಲ್ಲ.  ಈ ನಿಟ್ಟಿನಲ್ಲಿ ಭಾರತ ಸರಕಾರಕ್ಕೆ ಹಾಗೂ ಪೂನಾದ ಸೀರಂ ಇನ್‌ಸ್ಟಿಟ್ಯೂಟ್‌‌ಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.