ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋಮವಾರ ಬೆಳಿಗ್ಗೆ ತನ್ನ ಮಂತ್ರಿ ಮಂಡಲವನ್ನು ವಿಸ್ತರಿಸಿ 43 ಜನರನ್ನು ಹೊಸದಾಗಿ ಸಚಿವರಾಗಿ ತೆಗೆದುಕೊಂಡರು.
ಕೊರೋನಾ ಕಾರಣ ಸರಳವಾಗಿ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಜಗದೀಪ್ ದನ್ಕರ್ ಪ್ರಮಾಣವಚನ ಬೋಧಿಸಿದರು. ಕೊರೋನಾಕ್ಕೆ ಚಿಕಿತ್ಸೆ ಪಡೆಯುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಅಮಿತ್ ಮಿತ್ರಾ ಮತ್ತು ರತಿನ್ ಘೋಷ್ ವೀಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಪ್ರಮಾಣ ಪಡೆದರು.
43 ಸಚಿವರಲ್ಲಿ 24 ಜನ ಸಂಪುಟ ದರ್ಜೆಯ ಮಂತ್ರಿಗಳು. ಉಳಿದ ರಾಜ್ಯ ಸಚಿವರಲ್ಲಿ 10 ಜನ ಸ್ವತಂತ್ರ ಖಾತೆ ಹಾಗೂ ಉಳಿದವರು ಅಧೀನ ಖಾತೆ ಹೊಂದಿರುವರು.