ಸೋಮವಾರ ಮಧ್ಯಾಹ್ನದ ಹೊತ್ತಿಗೆ ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂನ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ರಾಜಭವನದಲ್ಲಿ ರಾಜ್ಯಪಾಲ ಜಗದೀಶ್ ಮುಖಿ ಅವರು ಮುಖ್ಯಮಂತ್ರಿ ಹಾಗೂ 14 ಜನ ಇತರ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಎನ್.ಇ.ಡಿ.ಎ.- ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಮನ್ವಯಕಾರ ಬಿಸ್ವ ಮೂಲ ಕಾಂಗ್ರೆಸ್‌ನವರಾಗಿದ್ದು 2016ರ ವಿಧಾನ ಸಭಾ ಚುನಾವಣೆಗೆ ತುಸು ಮುಂಚೆ ಬಿಜೆಪಿ ಸೇರಿದ್ದರು.