ಗುರುವಾರ ಲೋಕ ಸಭೆ ಮತ್ತು ರಾಜ್ಯ ಸಭೆಗಳಲ್ಲಿ ಪ್ರತಿ ಪಕ್ಷಗಳು  ಅದಾನಿ ಗುಂಪಿನ ಕಂಪೆನಿಗಳ ಸಾರ್ವಜನಿಕ ಹಣದ ವಂಚನೆ ಬಗೆಗೆ ಚರ್ಚೆಗೆ ಪಟ್ಟು ಹಿಡಿದದ್ದರಿಂದ ಬೆಳಿಗ್ಗೆ ಯಾವುದೇ ಕಲಾಪ ನಡೆಯಲಿಲ್ಲ, ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಅದಾನಿ ಕಂಪೆನಿಯಲ್ಲಿ ಎಲ್‌ಐಸಿ ಮತ್ತು ಎಸ್‌ಬಿಐ ಸಾರ್ವಜನಿಕರ ಹಣ ದುರುಪಯೋಗಕ್ಕೆ ಬಿದ್ದಿದೆ. ಗುರುವಾರ ಅದರ ಶೇರುಗಳ ಮೌಲ್ಯ 15 ಶೇಕಡಾ ಕುಸಿದಿವೆ. ಈ ಚರ್ಚೆ ಮುಖ್ಯ ಎಂದು ಪ್ರತಿ ಪಕ್ಷಗಳು ಪಟ್ಟು ಹಿಡಿದವು. ಅಡ್ಜರ್ನ್‌ಮೆಂಟ್ ನೋಟೀಸನ್ನು ರಾಜ್ಯ ಸಭೆಯಲ್ಲಿ ಸಭಾಪತಿ ಜಗದೀಪ್ ದನ್ಕರ್ ತಿರಸ್ಕರಿಸಿದರು. ಲೋಕ ಸಭೆಯಲ್ಲಿ ಪ್ರತಿಪಕ್ಷಗಳು ಒಂದೇ ಸಮನೆ ಘೋಷಣೆ ಕೂಗಿದ್ದರಿಂದ ಗದ್ದಲದ ಹೊರತು ಬೇರೇನೂ ಆಗಲಿಲ್ಲ.