ಪಟ್ಲ ಫೌಂಡೇಶನ್ ವತಿಯಿಂದ ಹಿರಿಯ ಬಲಿಪ ಭಾಗವತರಿಗೆ ಗೌರವಾರ್ಪಣೆ , ಕಿರಿಯ ಬಲಿಪ ಭಾಗವತರಿಗೆ ವೈದ್ಯಕೀಯ ನೆರವುಮಂಗಳೂರು: ಯಕ್ಷರಂಗದ ಬೀಷ್ಮ ಹಾಗೂ ಪ್ರಖ್ಯಾತ ಹಿರಿಯ ಭಾಗವತರೂ ೨೦೧೭ರ ಪಟ್ಲ ಪ್ರಶಸ್ತಿ ಪುರಸ್ಕೃತರೂ ಆಗಿರುವ ಶ್ರೀ ಬಲಿಪ ನಾರಾಯಣ ಭಾಗವತರ ವಿಶ್ರಾಂತಿ ಜೀವನದ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಪಧಾದಿಕಾರಿಗಳು ಅವರ ಸ್ವಗೃಹಕ್ಕೆ ತೆರಳಿ ಅವರಿಗೆ ಗೌರವಾರ್ಪಣೆ ಸಮರ್ಪಿಸಿ, ಇನ್ನಷ್ಟು ಕಾಲ ತಮ್ಮ ಮಾರ್ಗದರ್ಶನ ಹಾಗೂ ಆಶೀರ್ವಾದವು ಯಕ್ಷಗಾನ ಕಲಾವಿದರ ಮೇಲಿರಲಿ ಎಂದು ಪಟ್ಲ ಸತೀಶ್ ಶೆಟ್ಟಿಯವರು ಪ್ರಾರ್ಥಿಸಿ ಗುರುಗಳ ಆಶೀರ್ವಾದ ಪಡೆದರು.ಇದೇ ಸಂದರ್ಭದಲ್ಲಿ ಅಸೌಖ್ಯದಿಂದ ಚೇತರಿಸುತ್ತಿರುವ ಶ್ರೀ ಪ್ರಸಾದ್ ಬಲಿಪ ಭಾಗವತರಿಗೆ ವೈದ್ಯಕೀಯ ವೆಚ್ಚದ ನೆರವಿವಾಗಿ ರೂ ೫೦,೦೦೦/- ವನ್ನು ಟ್ರಸ್ಟ್ ವತಿಯಿಂದ ನೀಡಿ, ಉತ್ತಮ ಆರೋಗ್ಯವನ್ನು ಕಟೀಲು ತಾಯಿ ಭ್ರಮರಾಂಭೆ ಮತ್ತು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಯು  ಕರುಣಿಸಲೆಂದು ಟ್ರಸ್ಟ್ ಸದಸ್ಯರು ಶುಭ ಹಾರೈಸಿದರು. ಕೇಂದ್ರೀಯ ಸಮಿತಿಯ ಪದಾಧಿಕಾರಿಗಳಾದ ಡಾ! ಮನು ರಾವ್, ರಾಜೀವ ಪೂಜಾರಿ ಕೈಕಂಬ, ಕೆ ಪುರುಷೋತ್ತಮ ಭಂಡಾರಿ,  ಸಿ ಎ ಸುದೇಶ್ ಕುಮಾರ್ ರೈ, ಜಗನ್ನಾಥ ಶೆಟ್ಟಿ ಬಾಳ, ರವಿ ಶೆಟ್ಟಿ ಅಶೋಕನಗರ ಹಾಗೂ ಮೂಡಬಿದ್ರೆ ಘಟಕದ ಪದಾಧಿಕಾರಿಗಳಾದ ದಿವಾಕರ್ ಶೆಟ್ಟಿ ತೋಡಾರ್, ಪ್ರೇಮನಾಥ್ ಮಾರ್ಲ ಕೆ, ರವಿ ಪ್ರಸಾದ್ ಶೆಟ್ಟಿ , ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕೋಟ್ಯಾನ್ ಜತೆಗಿದ್ದರು.