ನಾವು ಗಾಂಧಿಯವರನ್ನು ಬಿಟ್ಟವರಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಜೀವ ಬೆದರಿಕೆ ಹಾಕಿದ ಭಾರತ ಹಿಂದೂ ಮಹಾಸಭಾದ ನಾಲ್ಕು ಜನರನ್ನು ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮಹಾಲಕ್ಷ್ಮಿ ಲೇಔಟ್‌ನ ಲೋಹಿತ್ ಕುಮಾರ್ ಬರ್ಕೆ ಪೋಲೀಸರಿಗೆ ನೀಡಿರುವ ದೂರಿನ ಮೇಲೆ ಈ‌ ಆರೋಪಿಗಳ ಬಂಧನವಾಗಿದೆ. ಹಿಂದೂ ಮಹಾಸಭಾದ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಬೆಂಗಳೂರು ಪೋಲೀಸರು ವಶಕ್ಕೆ ಪಡೆದರು

ಅಧ್ಯಕ್ಷ ರಾಜೇಶ್ ಪವಿತ್ರನ್, ಸಂದೀಪ್ ಶೆಟ್ಟಿ, ಪ್ರೇಮ್  ಪೊಳಲಿ ಇತರ ಮೂವರು ಬಂಧಿತರು.