ಸುಮಾರು 50,000 ಜನರ ಮೇಲೆ ಪೆಗಾಸಸ್ ಬಳಸಿ ಗೂಢಚಾರಿಕೆ ನಡೆದಿದೆ ಎಂಬ ಆರೋಪ ಇದೆ. ರಕ್ಷಣಾ ಗುಟ್ಟು ಇಲ್ಲಿ ಅನಗತ್ಯ, ಸರಿಯಾದ ವಿವರ ನೀಡದಿರುವುದು ಸರಿಯಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಒಕ್ಕೂಟ ಸರಕಾರದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿತು.

ಪೆಗಾಸಸ್ ಬಳಕೆ ರಕ್ಷಣಾ ಕ್ಷೇತ್ರದಲ್ಲಿ ಆಗಿರುವುದರಿಂದ ಆ ಬಗೆಗೆ ವಿವರವಾದ ಮಾಹಿತಿ ನೀಡುವುದು ದೇಶದ ಸುರಕ್ಷತೆಗೆ ಹಾನಿ ಉಂಟು ಮಾಡುತ್ತದೆ ಎಂದು ಸರಕಾರದ ಪರ ಸಾಲಿಸಿಟರ್ ಜನರಲ್ ವಾದಿಸಿದರು.

ರಕ್ಷಣಾ ವಿಷಯ ಬಿಡಿ, ಸಾರ್ವಜನಿಕ ವ್ಯಕ್ತಿಗಳ ಮೇಲೆ ಪೆಗಾಸಸ್ ಕುತಂತ್ರಾಂಶ ಬಳಸಿದ್ದು ನಿಜವೇ ಎಂಬ ಸುಪ್ರೀಂ ಪ್ರಶ್ನೆಗೆ ಸರಕಾರದ ಬಳಿ ಉತ್ತರ ಇರಲಿಲ್ಲ.