ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷೆಯಾದ ಡಾ ಸುಮತಿ ಎಸ್ ಹೆಗ್ಡೆ ಇವರ ನೇತೃತ್ವದಲ್ಲಿ ದಿನಾಂಕ 1/1/2023 ರಂದು ಕದ್ರಿಯ ಸುಮಾ ಸಧನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕಾರ್ಯಕ್ರಮ ನಡೆಯಿತು. ಸಭೆಯನ್ನು ದ.ಕ.ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಜಾಕೆ ಮಾಧವ ಗೌಡರು ಉಧ್ಘಾಟಿಸಿದರು. ಈ ಸಂಧರ್ಬ ಮಾತನಾಡಿದ ಅವರು ಕರ್ನಾಟಕದಲ್ಲಿ ಮಾನ್ಯ ಕುಮಾರಣ್ಣರ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಾಮಾಣಿಕವಾಗಿ ನುಡಿದಂತೆ ಪಂಚರತ್ನ ಯೋಜನೆ ಜಾರಿಗೊಳೊಸಲಿದ್ದಾರೆ. ಇದರಿಂದ ಜನರಿಗೆ ನೆಮ್ಮದಿಯ ಜೀವನ ಸಾಗಿಸಲು ಸಹಕಾರವಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಗರಿಷ್ಠ ಪ್ರಚಾರ ನಡೆಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದರು. ಈ ಸಂಧರ್ಭ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ನ ಹಲವಾರು ಕಾರ್ಯಕರ್ತರೂ , ಪ್ರಮುಖ ನೇತಾರರೂ ರಿಯಾಝ್ ಎ ಕಣ್ಣೂರು ಹಾಗೂ ಹಬೀಬ್ ಫಳ್ನಿರ್ ಇವರ ನೇತ್ರತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಡಾ. ಸುಮತಿ ಎಸ್ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿಜಯದ ಪತಾಕೆಯನ್ನು ಹಾರಿಸಲು ಎಲ್ಲರೂ ಕೈ ಜೋಡಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭ ಜೆಡಿಎಸ್ ಮುಖಂಡರಾದ ಜನಾಬ್ ಹೈದರ್ ಪರ್ತಿಪ್ಪಾಡಿ, ಶುಭ ಹಾರಿಸಿದರು. ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾಮಾತನಾಡಿ ಇಂದು ಪಕ್ಷಕ್ಕೆ ನೂರಕ್ಕೂ ಅಧಿಕ ಯುವಕರು ಸೇರ್ಪಡೆ ಗೊಂಡಿರುವದು ಈ ದೇಶದ, ರಾಜ್ಯದ ಭವಿಷದ ಚಿಂತನೆ ಅಡಗಿಸುವುದು ಸ್ವಷ್ಟವಾಗಿ ಎದ್ದು ಕಾಣುತ್ತದೆ. ವಿದಾನಸಭಾ ಕ್ಷೇತ್ರದ 38 ವಾರ್ಡಿಗಳಲಿ ಜೆಡಿಎಸ್ ಸಂಚಲನ ಮೂಡಿ ಬಂದಿದೆ ಎಂದು ಹೇಳಿದರು. ರಾಜ್ಯ ಸಂ.ಕಾರ್ಯದರ್ಶಿ ಝಮೀರ್ ಶಾ, ರಾಜ್ಯ ಮೀನುಗಾರಿಕೆ ಅಧ್ಯಕ್ಷ ರತ್ನಾಕರ ಸುವರ್ಣ ಪಕ್ಷದ ಸಂಘಟನೆ ಬಗ್ಗೆ ಮಾತನಾಡಿದರು. ಜಿಲ್ಲಾಯುವ ಘಟಕದ ಉಪಾಧ್ಯಕ್ಷ ಆಸಿಫ್ ಎಂಎಎಸ್ ತೋಡಾರ್ , ನಾಗೇಶ್ ಬಲ್ಮಠ, ಕನಕದಾಸ್ ಕೂಳೂರು, ರಾಶ್ ಬ್ಯಾರಿ ,ಸುಮಿತ್ ಸುವರ್ಣ. ಪ್ರಾನ್ಸಿಸ್,ಇಝಾ ಬಜಾಲ್ , ಲತೀಫ್ ವಲಚ್ಚಿಲ್, ವಿನ್ಸೆಂಟ್ ಕೊಡಿಕ್ಕಲ್ , ವೀಣಾ ಶೆಟ್ಟಿ, ಕವಿತಾ , ಶಾರದಾ ಶೆಟ್ಟಿ ,ಪ್ರಿಯಾ ಸಾಲ್ಯಾನ್, ಶಾಲಿಣಿ ರೈ ಶ್ರೀಮಣಿ ಆರ್ ಶೆಟ್ಟಿ ಹಾಗೂ ಹಲವಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಇದರ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಲ್ತಾಫ್ ತುಂಬೆ ಹಾಗೂ ಉಪಾಧ್ಯಕ್ಷರಾಗಿ ಇಝಾ ಬಜಾಲ್ ರನ್ನು ಆಯ್ಕೆಮಾಡಲಾಯಿತು. ಅಲ್ತಾಫ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.