ಮಂಗಳೂರು: ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 253 ನೇ ಕಾರ್ಯಕ್ರಮ `ಸಾಟ್ ಸತ್ತರ್ ಪದಾಂ ಮಧುರ್’ 01-01-23 ರಂದು ಕಲಾಂಗಣದಲ್ಲಿ ನಡೆಯಿತು. ಪ್ರಸಿದ್ಧ ಕಾರ್ಯಕ್ರಮ ನಿರೂಪಕ, ನಟ, ಗಾಯಕ ಮನೋಹರ್ ಪಾಯ್ಸ್, ಕೆನಡಾ ಇವರು ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಂಡ್ ಸೊಭಾಣ್ ನಿರ್ಮಾಣದ `ಅಸ್ಮಿತಾಯ್’ ಚಲನಚಿತ್ರದ ಪ್ರಮುಖ ನಟಿಯಾಗಿ ವೆನ್ಸಿಟಾ ಡಾಯಸ್ ಇವರನ್ನು ಪರಿಚಯಿಸಲಾಯಿತು. ವೇದಿಕೆಯಲ್ಲಿ ಎರಿಕ್ ಒಝೇರಿಯೊ, ಲುವಿಸ್ ಪಿಂಟೊ, ಕಿಶೋರ್ ಫೆರ್ನಾಂಡಿಸ್, ಸ್ಟ್ಯಾನಿ ಆಲ್ವಾರಿಸ್, ಸಿನೆಮಾ ನಿರ್ದೇಶಕ ವಿಲಾಸ್ ನಾಯಕ್ ಮತ್ತು ಛಾಯಾಗ್ರಾಹಕ ಬಾಲರಾಜ್ ಗೌಡ ಉಪಸ್ಥಿತರಿದ್ದರು.
ನಂತರ ಚರಣ್ ಮಲ್ಯ ಇವರ ನಿರ್ದೇಶನದಲ್ಲಿ ಎರಿಕ್ ಒಝೇರಿಯೊ, ಜೊಯ್ಸ್ ಒಝೇರಿಯೊ, ಜೆರಿ ಡಿಮೆಲ್ಲೊ ಬಿಜೈ, ರೊನಾಲ್ಡ್ ಲಸ್ರಾದೊ ಬೊಂದೆಲ್, ರೊನಿ ಡಿಸೋಜ ಬಿಜೈ, ಹ್ಯೂಬರ್ಟ್ ಡಿಸಿಲ್ವಾ, ಜೊಸ್ಸಿ ಮಸ್ಕರೇನ್ಹಸ್ ಬಜ್ಪೆ, ಅನ್ನಾ ಡಿಸೋಜ ಬೆಂದುರ್, ಜೊಸೆಫ್ ಪಿಂಟೊ ಆಂಜೆಲೊರ್ ಇವರು ಹಾಡುಗಳನ್ನು ಪ್ರಸ್ತುತ ಪಡಿಸಿದರು. ಜೆರೊಮ್ ಡಿಸೋಜ, ವಿಲ್ಫಿ ರೆಬಿಂಬಸ್, ಮಿಕ್ ಮ್ಯಾಕ್ಸ್, ರೊನಿ ಬೊಂದೆಲ್, ಜೆರಿ ಡಿಮೆಲ್ಲೊ, ವಲ್ಲಿ ವಾಸ್, ಆಸ್ಟಿನ್ ಪ್ರಭು, ರೊನಿ ಕ್ರಾಸ್ತಾ ಕೆಲರಾಯ್ ಇವರ ಸಾಹಿತ್ಯ ಮತ್ತು ಸ್ವರ ಸಂಯೋಜನೆಯ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡವು.
ಸುನೀಲ್ ಕುಮಾರ್ (ವಯೊಲಿನ್ ), ಉಮೇಶ್ ಇಡ್ಯಾ (ಸ್ಯಾಕ್ಸೊ ಫೊನ್), ನವೀನ್ ಚಂದ್ರ (ಲೀಡ್ ಗಿಟಾರ್), ಸ್ವೀಬರ್ಟ್ ಮಸ್ಕರೇನ್ಹಸ್ (ಬೇಝ್ ಗಿಟಾರ್), ಕೀರ್ತಿ (ಕೀ ಬೋರ್ಡ್) ಮತ್ತು ಅರ್ನಾಲ್ಡ್ ಲೋಬೊ (ಡ್ರಮ್ಸ್) ಇವರು ಸಂಗೀತದಲ್ಲಿ ಸಹಕರಿಸಿದರು. ಡೊರಾ, ಇಡಿತ್, ರೆನ್ನಿ ಮತ್ತು ಜಾನೆಟ್ ಇವರು ನೃತ್ಯಗಳನ್ನು ಸಾದರಪಡಿಸಿದರು. ನೆಲ್ಲು ಪೆರ್ಮನ್ನೂರು ಕಾರ್ಯಕ್ರಮ ನಿರೂಪಿಸಿದರು. ಕಿಂಗ್ಸ್ ಲೀ ನಜ್ರೆತ್ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಲು ಸಹಕರಿಸಿದರು.