ಸಂಸತ್ತಿನಲ್ಲಿ ತತ್ಸಂಬಂಧಿ ಕಾಯ್ದೆ ಪಾಸು ಮಾಡಿ ಅದರಂತೆ ಕ್ರಮವಾಗಿ ನೋಟು ರದ್ದು ಮಾಡಬೇಕೇ ಹೊರತು ಸರಕಾರ ತಾನೇ ನಿರ್ಣಯ ತೆಗೆದುಕೊಂಡು ಮಾಡುವ ಕೆಲಸ ಅದಲ್ಲ ಎಂದು ಜಸ್ಟಿಸ್ ಬಿ. ವಿ. ನಾಗರತ್ನ ಹೇಳಿದರು. ಆದರೆ ಸುಪ್ರೀಂ ಕೋರ್ಟ್ ಪೀಠದಲ್ಲಿದ್ದ ಐದು ಮಂದಿ ಜಸ್ಟಿಸ್‌ಗಳಲ್ಲಿ ನಾಲ್ವರು ನೋಟು ರದ್ದು ತಪ್ಪು ಎನ್ನಲು ಕಾರಣಗಳಿಲ್ಲ ಎಂದು ಹೇಳಿದ್ದರಿಂದ ಸರಕಾರಕ್ಕೆ ಜಯವಾಯಿತು.
Photo Credit: Zee News
2016ರ ನವೆಂಬರ್‌ನಲ್ಲಿ ರೂಪಾಯಿ1,000 ಮತ್ತು 500ರ ನೋಟು ರದ್ದು ಮಾಡಿದ್ದನ್ನು ಪ್ರಶ್ನಿಸಿ 58 ಅರ್ಜಿಗಳು ಸುಪ್ರೀಂ ಕೋರ್ಟಿಗೆ ಬಂದಿದ್ದವು. ಇದು ನ್ಯಾಯದ ಹಾದಿಯಲ್ಲಿ ಆಗಿಲ್ಲ, ಸರಕಾರದ ಆದೇಶ ರದ್ದು ಪಡಿಸುವಂತೆ ಅವರೆಲ್ಲ ಕೋರಿದ್ದರು.
ನಕಲಿ ನೋಟು, ಕಳ್ಳ ಹಣ, ತೆರಿಗೆ ವಂಚನೆ, ಉಗ್ರರಿಗೆ ಧನ ಸಹಾಯ ತೊಡೆಯಲು ನೋಟು ರದ್ದು ಮಾಡಲಾಯಿತು ಎಂದು ಸರಕಾರದ ಪರ ವಾದಿಸಲಾಯಿತು.
ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೆ ಆರು ತಿಂಗಳು ಈ ಬಗೆಗೆ ವಿಚಾರ ವಿನಿಮಯ ನಡೆಸಿದ್ದಾಗಿ ಕೇಂದ್ರ ಸರಕಾರ ಹೇಳಿದ್ದು ಫಲ ನೀಡಿತು.