ಮಂಗಳೂರು: ಕೊಂಕಣಿ ಭಾಶೆಯ ಹಾಗೂ ಎಲ್ಲಾ 42 ವಿಭಾಗದ ಹಾಗೂ ಕ್ರೈಸ್ತ, ಮುಸ್ಲಿಂ, ಕುಡುಬಿ, ಸಾರಸ್ವತ್ ಮಾತೃಭಾಷೆ ಕೊಂಕಣಿ ಮಾತನಾಡುವ ಕರ್ನಾಟಕದ ಜನರು ಇರುವ ಸಂಘಟನೆ ಆದ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಐವತ್ತನೇಯ ವರುಷದ ಉದ್ಘಾಟನೆ ಮಂಗಳೂರಿನ ಬಿಇಎಮ್ ಸ್ಕೂಲ್ ಹಾಲ್ ನಲ್ಲಿ ಮೂವತ್ತೈದು ಕೊಂಕಣಿ ಸಂಸ್ಥೆಗಳು ಜೊತೆಗೆ ಸೇರಿ ಮಾಡಲಾಯಿತು.
ಕರ್ನಾಟಕ ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್ ಅವರು ಕರಾವಳಿಯ ಬೇಸಾಯ ಕ್ರಮದ ಕಲಸೆಯ ಮೇಲೆ ತಡಪೆ ಇಟ್ಟು ಅದರ ಮೇಲೆ ಸೇರು ಇಟ್ಟು ಅದರಲ್ಲಿ ಅಕ್ಕಿ ತುಂಬಿಸಿ ದೀಪ ಇಡುವ "ತುಪ್ಪೆ ತುಂಬಿಸಿ ದೀಪ ಬೆಳಗಿಸಿ ಸಂಭ್ರಮ" ಪಡುವ ಪ್ರಕ್ರಿಯೆ ಚಾಲನೆ ನೀಡಿದರು. ಉಳಿದ ಸಂಸ್ಥೆಗಳ ಮುಖ್ಯಸ್ಥರು ತಾವೂ ಈ ಸಂಭ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಬದಲ್ಲಿ ಮಾತನಾಡಿದ ಅಕಾಡೆಮಿಯ ರಿಜಿಸ್ಟ್ರಾರ್ "ಕೊಂಕಣಿ ಅಕಾಡೆಮಿ ಮತ್ತು ಎಂಟನೆಯ ಪರಿಚ್ಛೇದದಲ್ಲಿ ಕೊಂಕಣಿ ಸೇರ್ಪಡೆಗೆ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಚಳುವಳಿ ಮಾಡಿದ ಬಗ್ಗೆ ಬಹಳ ಕೇಳಿದ್ದೆನೆ. ನಿಮ್ಮ ಶ್ರಮದ ಫಲ ಈಗಿನ ಕೊಂಕಣಿ ಜನರು ಉಣ್ಣಿತ್ತಿದ್ದಾರೆ. ಮುಂದೆಯೂ ಜೊತೆಗೆ ಕೊಂಕಣಿಯ ಕೆಲಸ ಮಾಡುವ" ಎಂದರು.
ಮುಖ್ಯ ಅತಿಥಿ ದೈವಜ್ನ ಕೊಂಕಣಿ ಸಮುದಾಯದ ಮೋಹನ್ ಪಾಲಂಕರ್ ಮಾತನಾಡಿ "ಮಾತೃಭಾಷೆ ಬಗ್ಗೆ ಸಾಂಸ್ಥಿಕ ನೆಲೆಯಲ್ಲಿ ಕೆಲಸ ಆಗಬೇಕು. ಅದಕ್ಕೆ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಮುಂದಾಳತ್ವ ವಹಿಸಿದರೆ ನಾವು ಜೊತೆಯಲ್ಲಿ ಬರುತ್ತವೆ" ಎಂದರು.
ಬಿಇಎಮ್ ಸ್ಕೂಲ್ ಆಡಳಿತದ ಕಾರ್ಯದರ್ಶಿ ಅಮಿತಾನಂದ ಅವರು ಮಾತನಾಡಿ "ತಾಯಿಗೆ ಸೇವೆ ಮಾಡಿದ ಹಾಗೆ ಭಾಶೆಯ ಸೇವೆ. ಅದಕ್ಕೆ ಬೇಕಾದ ಬೆಂಬಲ ವನ್ನು ನಾವು ಕೊಡಲು ಬದ್ಧ" ಎಂದು ಹೇಳಿದರು. ಗೌರವ ಅತಿಥಿಗಳಾದ ಹಿಂದಿನ ಕೊಂಕಣಿ ಅಕಾಡೆಮಿಯ ಅದ್ಯಕ್ಷ ರೋಯ್ ಕಾಸ್ತೆಲಿನೊ ಮಾತನಾಡಿ "ನಾವು ಜೊತೆಗೆ ಸೇರಿಕೊಂಡು ಮಾತೃಭಾಷೆ ಕೆಲಸ ಮಾಡುವ" ಎಂದರು.
ರಾಕ್ಣೊ ನಿಯೋಜಿತ ಸಂಪಾದಕ ಫಾ ರೂಪೇಶ್ ಮಾಡ್ತಾ, ಕೊಡಿಯಾಲ್ ಖಬರ್ ಡಾಟ್ ಕಾಮ್ ಸಂಪಾದಕ ವೆಂಕಟೇಶ ಬಾಳಿಗ ,ಅಕಾಡೆಮಿ ಮಾಜಿ ಸದಸ್ಯ ಶೇಖರ್ ಗೌಡ, ಅರುಣ್ ಜಿ ಶೇಟ್, ಪೊಯೆಟಿಕಾ ಕವಿಗಳ ವಾಟ್ಸಾಪ್ ಬಳಗದ ಅಡ್ಮಿನ್ ನವೀನ ಪಿರೇರಾ ಸುರತ್ಕಲ್, ಐಎಫ್ಸಿಎ ಬೆಂಗಳೂರು ಇದರ ಲುಲ್ಲುಸ್ ಕುತಿನೊ, ಡಾ ಅರವಿಂದ್ ಶಾನುಭಾಗ್ ಬಾಳೇರಿ, ಶೀತಲ್ ಪಾಲಂಕಾರ್ ಶುಭಹಾರೈಸಿದರು.
ಮಾಂಡ್ ಸೊಭಾಣ್ ಅದ್ಯಕ್ಷ ಲುವಿಸ್ ಜೆ ಪಿಂಟೊ, ಕೊಂಕಣಿ ನಾಟಕ ಸಭಾದ ಅದ್ಯಕ್ಷ ಪಾ ರೊಕಿ ಡಿಕೂನಾ, ಮಂಗಳೂರು ವಿವಿಯ ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ ಜಯವಂತ್ ನಾಯಕ್, ಕುಡುಬಿ ಕಲಾ ವೇದಿಕೆ ಬಜ್ಪೆಯ ಹೇಮರಾಜ್ ಬಜ್ಪೆ, ಅಸ್ಥಿತ್ವ ನಾಟಕ ಸಂಸ್ಥೆಯ ಕ್ರಿಸ್ಟೊಫರ್ ನೀನಾಸಂ, ಕೊಂಕಣಿ ಲೇಖಕರ ಸಂಘ ಕಿನ್ನಿಗೋಳಿ ಅದ್ಯಕ್ಷ ಜೊಸ್ಸಿ ಪಿಂಟೊ ಕಿನ್ನಿಗೋಳಿ, ಕೊಂಕಣಿ ರಾಜಪುತ್ ಸಂಸ್ಥೆಯ ಪುಂಡಲೀಕ ಮರಾಠೆ,ಕರ್ನಾಟಕ ಕೊಂಕಣಿ ಭಾಶಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಂಘದ ಅದ್ಯಕ್ಷ ಡಾ ಕಸ್ತೂರಿ ಮೋಹನ್ ಪೈ,ಕೆಬಿಎಮ್ ಇದರ ಹಿಂದಿನ ಕಾರ್ಯದರ್ಶಿ, ತಾಜ್ ಮಹಲ್ ಹೋಟೆಲ್ ನ ಕುಡ್ಪಿ ಜಗದೀಶ್ ಪೈ,ಪ್ರೊಫೆಸರ್ ಉರ್ಬನ್ ಡಿಸೋಜ ಬೆಂಗಳೂರು, ವೇದಿಕೆಯಲ್ಲಿ ಇದ್ದರು.
ಇದೇ ಸಂಧರ್ಭದಲ್ಲಿ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಐವತ್ತು ವರ್ಷಗಳ ಮೊದಲು ಸ್ಥಾಪಕ ಕಾರ್ಯದರ್ಶಿ ಆಸ್ಟಿನ್ ಡಿಸೋಜ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಕೆ ವಸಂತ ರಾವ್ ಅದ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಸಂಚಾಲಕ ಕಾರ್ಯದರ್ಶಿ ರೇಮಂಡ್ ಡಿಕೂನಾ ಸ್ವಾಗತಿಸಿದರು, ಸಹ ಕಾರ್ಯದರ್ಶಿ ಜೂಲಿಯೆಟ್ ಫೆರ್ನಾಂಡೀಸ್ ವಂದಿಸಿದರು. ಕಾತ್ಯಾಯನಿ ಮಠದ ವೇದಮೂರ್ತಿ ಗೋಪಾಲಕೃಷ್ಣ ಭಟ್ ಪ್ರಾರ್ಥನೆ ಮಾಡಿದರು.ಮಾಜಿ ಅದ್ಯಕ್ಷರಾದ ಗೀತಾ ಕಿಣಿ ಪ್ರಾಸ್ತಾವಿಕ ಮಾತನಾಡಿದರು ಕೊಂಕಣಿ ಶಿಕ್ಷಕರು ರಾಬರ್ಟ್ ಮೆನೇಜಸ್ ನಿರೂಪಿಸಿದರು.
ಮೀನಾಕ್ಷಿ ಎನ್ ಪೈ,ಸುರೇಶ್ ಶೆಣೈ, ರತ್ನಾಕರ್ ಕುಡ್ವಾ, ಪ್ಲಾವಿಯಾ ಅಲ್ಬುಕರ್ಕ್ ಪುತ್ತೂರು, ಫ್ಲೋರಾ ಕ್ಯಾಸ್ತೆಲಿನೊ ಪಾನೀರ್, ರಿಯಾನಾ ಡಿಕೂನಾ, ನತಾಲಿಯಾ ಡಿಕೂನಾ, ಫೆಲ್ಸಿ ಲೋಬೊ, ಅಂಜಲಿ, ಫೆಲ್ಸಿಟಾ ಮತ್ತಿತರರು ಉಪಸ್ಥಿತರಿದ್ದರು.