Credits: Republic World

2024ರ ವಿಧಾನ ಸಭಾ ಚುನಾವಣೆಗೆ ಮೊದಲು ಟೆಸ್ಟ್ ಡೋಸ್‌ಗಳಾಗಿ ಕರ್ನಾಟಕವೂ ಸೇರಿದಂತೆ ಒಂಬತ್ತು ರಾಜ್ಯಗಳ ವಿಧಾನ ಸಭಾ ಚುನಾವಣೆ ನಡೆಯಲಿದೆ.

ಕರ್ನಾಟಕದ ಹಾಲಿ ವಿಧಾನ ಸಭೆಯ ಅವಧಿಯು ಮೇ 24ಕ್ಕೆ ಮುಗಿಯಲಿದೆ. ಏಪ್ರಿಲ್‌ನಿಂದ ಮೇ ಅವಧಿಯಲ್ಲಿ ಕರ್ನಾಟಕ ವಿಧಾನ ಸಭೆಯ 224 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.

ಈಶಾನ್ಯ ಭಾರತದ ನಾಗಾಲ್ಯಾಂಡ್, ತ್ರಿಪುರ, ಮೇಘಾಲಯ, ಮಿಜೋರಾಂ 2023ರಲ್ಲಿ‌ ಚುನಾವಣೆ ನೋಡಲಿದ್ದು, ಇವುಗಳಲ್ಲಿ ಮೊದಲ ಮೂರು ಮರಿ ರಾಜ್ಯಗಳ ಚುನಾವಣೆಯು 2023ರ ಫೆಬ್ರವರಿಯಲ್ಲಿಯೇ ನಡೆಯುತ್ತವೆ.

ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸಗಡ, ಮಿಜೋರಾಂ ವಿಧಾನ ಸಭೆ ಚುನಾವಣೆಗಳು 2023ರ ಕೊನೆಯ ತಿಂಗಳಲ್ಲಿ ನಡೆಯುತ್ತದೆ.

ತೆಲಂಗಾಣ ಸಹ ಚುನಾವಣೆಗೆ ಕಾದಿರುವ ರಾಜ್ಯವಾಗಿದೆ. ಈ ಒಂಬತ್ತು ರಾಜ್ಯಗಳ ಫಲಿತಾಂಶಗಳ ಮೇಲೆ ಲೋಕ ಸಭಾ ಫಲಿತಾಂಶವನ್ನು ಅಂದಾಜು ಮಾಡುವ ಪ್ರಕ್ರಿಯೆ ನಡೆಯುತ್ತದೆ. 

ಸದ್ಯಕ್ಕಂತೂ ಎಲ್ಲವೂ ಗೊಂದಲ ಮತ್ತು ಮೀಸಳಬಾಜಿ ನಿರೀಕ್ಷಿಸಲಾಗಿದೆ.