ಆಪಾದಿತನು ಸಂತ್ರಸ್ತೆಯನ್ನು ಮದುವೆಯಾದರೂ ಪೋಕ್ಸೋ ಪ್ರಕರಣ ರದ್ದಾಗುವುದಿಲ್ಲ. ಹಾಗೆ ರದ್ದು ಮಾಡಿದಲ್ಲಿ ಅದು ತಪ್ಪು ಸಂದೇಶ ನೀಡುತ್ತದೆ ಎಂದು ಹೈಕೋರ್ಟಿನ ಜಸ್ಟಿಸ್ ಎಚ್. ಪಿ. ಸುರೇಶ್ ಅವರಿದ್ದ ಪೀಠವು ಹೇಳಿದೆ.

ಬಸವನಬಾಗೇವಾಡಿಯ ಆರೋಪಿ ಅಪ್ರಾಪ್ತಳನ್ನು ಕೊಲ್ಲಾಪುರಕ್ಕೆ ಅಪಹರಿಸಿದ್ದ. ಬಾಲಕಿ ಬಸುರಾಗಿ ಮುಂದೆ ಮಗುವಿಗೂ ಜನ್ಮ ನೀಡಿದ್ದಾಳೆ. ಬಂಧನದಲ್ಲಿರುವ ಆರೋಪಿ ಈಗ ಸಂತ್ರಸ್ತೆಯೊಡನೆ ರಾಜಿಯಾಗಿ, ಪ್ರಕರಣ ರದ್ದು ಪಡಿಸಲು ಆಕೆಯ ಸಹಿತ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆ ವಿಚಾರಣೆಯಲ್ಲಿ ಕೋರ್ಟು ಪ್ರಕರಣ ರದ್ದು ಪಡಿಸಲಾಗದು ಎಂದಿತು.