ಮಂಗಳೂರು ಹೊರ ವಲಯ ಉಲಾಯಿಬೊಟ್ಟು ಪರಾರಿಯಲ್ಲಿ 8 ವರುಷದ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿ, ಮೋರಿಗೆ ಎಸೆದಿರುವ ಸಂಗತಿ ನಡೆದಿದೆ.
ಇಲ್ಲಿನ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ 30ರಷ್ಟು ಜನ ಕೆಲಸ ಮಾಡುತ್ತಿದ್ದು, ಅವರಲ್ಲಿ ಬಡಗಣ ಭಾರತೀಯರೇ ಹೆಚ್ಚು. ಅಸ್ಸಾಂ ಮೂಲದ ಕಾರ್ಮಿಕರ ಮಗಳು ಮಧ್ಯಾಹ್ನ ನಾಪತ್ತೆಯಾಗಿದ್ದಳು. ಸಂಜೆ ಪಕ್ಕದ ಮೋರಿಯಲ್ಲಿ ಹುಡುಗಿಯ ಶವ ಪತ್ತೆಯಾಗಿದೆ. ಫ್ಯಾಕ್ಟರಿಯವರೇ ಮಾಡಿರುವ ಸಂಶಯವಿದ್ದು, ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕಮಿಶನರ್ ಶಶಿಕುಮಾರ್ ತಿಳಿಸಿರುವರು.