ಕಾರ್ಕಳ ಜಿಲ್ಲಾ ಅಲ್ಪ ಸಂಖ್ಯಾತರ ವೇದಿಕೆ (ರಿ) ಉಡುಪಿ ಜಿಲ್ಲೆ ಇದರ ಕಾರ್ಕಳ ತಾಲೂಕು ಘಟಕದ ಸ್ಥಾಪನೆಯು 28-11-2022 ರಂದು ಕಾರ್ಕಳ ಕ್ರೈಸ್ಟ್‌ಕಿಂಗ್ ಶಾಲೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ  ರೋಬರ್ಟ್‌ ಮಿನೇಜನಸ್‌ ರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಭೆಯ ಉದ್ಘಾಟನೆಯನ್ನು ಜಿಲ್ಲಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಜನಾಬ್‌ ಬೈಕಾಡಿ ಹುಸೈನ್‌ರವರು ವೇದಿಕೆಯ ಸಂವಿಧಾನದ ಪ್ರತಿಯನ್ನು ಬಿಡಿಸಿ ನಿಯಮಾವಳಿಗಳನ್ನು ಓದುವ ಮೂಲಕ ಉದ್ಘಾಟಿಸಿದರು.

ಜಿಲ್ಲಾ ಅಧ್ಯಕ್ಷರು ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ತಮ್ಮ ಪ್ರಸ್ತಾವನೆಯೊಂದಿಗೆ ವೇದಿಕೆಯು ನಡೆದು ಬಂದ ದಾರಿ, ಇದರ ಮಹತ್ವ ಹಾಗೂ ಅವಶ್ಯಕತೆಯನ್ನು ವಿವರಿಸಿದರು.  ರೋಬರ್ಟ್‌ ಮಿನೇಜಸ್‌ರವರು ಕಾರ್ಕಳ ತಾಲೂಕು ಘಟಕದ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿದರು. 2022-2024ರ ಸಾಲಿನ ಘಟಕಾಧ್ಯಕ್ಷರಾಗಿ  ಪ್ರಕಾಶ್ ಡಿ'ಸೋಜ ಅಜೆಕಾರ್ ಇವರು ಸರ್ವಾನುಮತದಿಂದ ಚುನಾಯಿತರಾದರು. ಕಾರ್ಯದರ್ಶಿಯಾಗಿ ಡಿ.ಜೆ. ಮುಸ್ತಾಕ್ - ಕಾಬೆಟ್ಟು, ಉಪಾಧ್ಯಕ್ಷರಾಗಿ  ಲಿಡಿಯಾ ಅರನ್ಹ - ಬೆಳ್ಮಣ್, ಸಹ ಕಾರ್ಯದರ್ಶಿಯಾಗಿ ಶಾಂತಿ ನಜ್ರೆತ್ - ಮಿಯ್ಯಾರು ಹಾಗೂ ಖಜಾಂಚಿಯಾಗಿ ಶೌಕತ್ ಹುಸೇನ್ - ಕಾರ್ಕಳ ಇವರೆಲ್ಲಾ ಅವಿರೋಧವಾಗಿ ಚುನಾಯಿತರಾದರು.

ಘಟಕದ ಸಲಹಾಗಾರರಾಗಿ ಸ್ಥಳೀಯ ಚರ್ಚ್‌ ಧರ್ಮಗುರುಗಳಾದ ಕ್ಲೆಮೆಂಟ್ ಮಸ್ಕರೇನಸ್, ರೋಬರ್ಟ್ ಮಿನೇಜಸ್ ಎಮ್.ಪಿ., ಮೊಯ್ದಿನಬ್ಬ ಹಾಗೂ ಸೆವ್ರಿನ್ ಡೇಸಾರವರನ್ನು ಸರ್ವಾನುಮತದಿಂದ ನೇಮಿಸಲಾಯಿತು.

ಘಟಕದ ಸಲಹಾಗಾರರಾಗಿ ಸ್ಥಳೀಯ ಚರ್ಚ್‌ ಧರ್ಮಗುರುಗಳಾದ ಕ್ಲೆಮೆಂಟ್ ಮಸ್ಕರೇನಸ್,  ರೋಬರ್ಟ್ ಮಿನೇಜಸ್ ಎಮ್.ಪಿ., ಮೊಯ್ದಿನಬ್ಬ ಹಾಗೂ ಸೆವ್ರಿನ್ ಡೇಸಾರವರನ್ನು ಸರ್ವಾನುಮತದಿಂದ ನೇಮಿಸಲಾಯಿತು. ಜಿಲ್ಲಾ ವೇದಿಕೆಯ ಕಾರ್ಯದರ್ಶಿ ಜನಾಬ್ ಕಾಸಿಂ ಬಾರ್ಕುರ್ ರವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.