ಬೆಳ್ತಂಗಡಿ:  ಹೋಲಿ ರಿಡೀಮರ್‍ ಆಡಿಟೋರಿಯಂ ಸಭಾಂಗಣದಲಿ ಚರ್ಚ್‍ ಗಾಯಾನಾ ಮಂಡಳಿಯ ಹಬ್ಬವನ್ನು ಆಚರಿಸಲಾಯಿತು. ಪ್ರಾರ್ಥನಾ ವಿಧಿಯನ್ನು ಹೋಲಿ ರಿಡೀಮರ್ ಶಾಲಾ ಮುಖ್ಯಸ್ಥರು ವಂ. ಗುರುಕ್ಲಿಫರ್ಡ್ ಪಿಂಟೊರವರು  ನಡೆಸಿದರು. ಮಕ್ಕಳ ಗಾಯಾನ ತಂಡವನ್ನು ಪುಟ್ಟ ದೀಪಗಳನ್ನು ಉರಿಸಿ  ಗಾಯಾನ ತಂಡದ ಪಾಲಕಿ ಸಂತ ಸಿಸಿಲಿಯಾರವರ ಭಾವ ಚಿತ್ರಕ್ಕೆಇಡುವ ಮೂಲಕ ಉದ್ಘಾಟಿಸಲಾಯಿತು.  

ಮನೋರಂಜನೆಗಾಗಿ ಕೆಲವು ಅದೃಪ್ಷ ಆಟಗಳನ್ನು ವಂ. ಗುರುಕ್ಲಿಫರ್ಡ್ ಪಿಂಟೊರವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಹೋಲಿ ರಿಡೀಮರ್ ಪ್ರಾಂಶುಪಾಲರು ವಂ. ಗುರು ಕ್ಲಿಫರ್ಡ್ ಪಿಂಟೊ ಅಧ್ಯಕ್ಷತೆ, ಬ್ರದರ್ ಪ್ರೀತಮ್‍ ಮುಖ್ಯ ಅತಿಥಿ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ  ಪಾವ್ಲಿನ್‍ ರೇಗೊ, ಗಾಯಾನ ಮಂಡಳಿ ಅಧ್ಯಕ್ಷರು  ಲ್ಯಾನ್ಸಿ ಪಿರೇರಾ, ಗಾಯಾನ ಮಂಡಳಿಯ ಗುರು ವಿನ್ಸೆಂಟ್ ಡಿ’ಸೋಜ, ಕಾರ್ಯದರ್ಶಿ ಥಿಯೋಫಿಲಾ ವೇದಿಕೆಯಲ್ಲಿದ್ದರು. ಪ್ರಧಾನ ಧರ್ಮಗುರುಗಳು ವಂ. ಗುರು ಜೋಸೆಫ್‍ ಕಾರ್ಡೊಜಾರವರು ಆಶೀರ್ವಚನಗೈದು ಹಬ್ಬದ ಆಚರಣೆಗೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ರೊನಾಲ್ಡ್ ಲೋಬೊರವರು ಯಶಸ್ವಿಯಾಗಿ ನಿರೂಪಿಸಿದರು. ವಿನ್ಸೆಂಟ್ ಡಿ’ಸೋಜರವರು ಸ್ವಾಗತಿಸಿ, ಥಿಯೋಫಿಲಾರವರು ಸರ್ವರನ್ನು ವಂದಿಸಿದರು.