ಮಂಗಳೂರು: ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ಅಂತಾರಾಷ್ಟ್ರೀಯ ತೀರ್ಪುಗರರಾಗಿರುವ  ಕೆ. ಹರೀಶ್ ಕುಮಾರ್ ಅವರು ನವೆಂಬರ್ 24 ರಿಂದ ಡಿಸೆಂಬರ್ 4, 2022 ತನಕ  ನ್ಯೂಜಿಲ್ಯಾಂಡಿನ  ಆಕ್ಲೆಂಡ್ ನಲ್ಲಿ  ನಡೆಯಲಿರುವ  ಕಾಮನವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪನಲ್ಲಿ  M4- ವಿಭಾಗದಲ್ಲಿ  84 ಕೆಜಿ ದೇಹ ತೂಕದಲ್ಲಿ ಭಾರತವನ್ನು  ಪ್ರತಿನಿಧಿಸಲಿದ್ದಾರೆ. 

ಮತ್ತು ಅಂತಾರಾಷ್ಟ್ರೀಯ ತೀರ್ಪುಗಾರರಾಗಿ  ಭಾಗವಹಿಸಲಿದ್ದಾರೆ. ಇವರು  ಮಂಗಳೂರಿನ  ಬಾಲಂಜನೇಯ  ಜಿಮ್ನೇಸಿಯಂನ ಸದಸ್ಯರು  ಮತ್ತು ಪ್ರಧಾನ ಅಂಚೆ ಕಚೇರಿಯ ನಿವೃತ್ತ ಉದ್ಯೋಗಿ.