ಪಂಜಾಬಿನ ಹೊಸ ಡಿಜಿಪಿ- ಪೋಲೀಸ್ ಮಹಾ ನಿರ್ದೇಶಕರಾಗಿ ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ಅವರು ಅಧಿಕಾರ ವಹಿಸಿಕೊಂಡರು.

ಇಲ್ಲಿಯವರೆಗೆ ಪಂಜಾಬಿನಲ್ಲಿ 40 ಮಂದಿ ಡಿಜಿಪಿಗಳಾಗಿದ್ದು ಅವರಲ್ಲಿ ಮೂವರು ದಲಿತರು. 1986ರಲ್ಲಿ ಸುದೇ ಸಿಂಗ್ ಮತ್ತು 2009ರಲ್ಲಿ ಕಮಲ್ ಕೆ. ಅಟ್ರಿ ದಲಿತ ವರ್ಗದಿಂದ ಬಂದ ಡಿಜಿಪಿಗಳು ಆದರೆ ಅವರು ಕ್ರಮವಾಗಿ 8 ಮತ್ತು 5 ತಿಂಗಳು ಹುದ್ದೆಯಲ್ಲಿ ಇದ್ದರು. ಈಗ ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾರಿಗೆ ಹೆಚ್ಚಿನ ಅವಕಾಶವಿದೆ.