ಮಂಗಳೂರಿನಲ್ಲಿ ಸಂಘ ಪರಿವಾರದವರು ಅನೈತಿಕ ಪೋಲೀಸ್‌ಗಿರಿ ನಡೆಸಿ ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಸಂಸ್ಕೃತಿ ಸಂಘಟನೆಯ ಸಂಸ್ಕೃತಿಯೇ ಎಂದು ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳ್ಕೆ ಬೀಸಿದ್ದಾರೆ.

ಆರೆಸ್ಸೆಸ್ ರಾಜಕೀಯ ಪಕ್ಷವಲ್ಲ, ಸಾಂಸ್ಕೃತಿಕ ಸಂಘಟನೆ ಎಂದು ಸಿ. ಟಿ. ರವಿ ಹೇಳುತ್ತಾರೆ. ಹಾಗಾದರೆ ಆರೆಸ್ಸೆಸ್ ಜನರಿಗೆ ನೈತಿಕ ಪೋಲೀಸ್ ಗಿರಿ ಮಾಡುವ ಕೆಲಸವೆ, ಬಿಜೆಪಿಯನ್ನು ಟೀಕಿಸಿದರೆ ಬಡಾಯಿ ಕೊಚ್ಚುವ ಕೆಲಸವೆ, ಆರೆಸ್ಸೆಸ್ ಬಿಜೆಪಿಗೆ ನಾಯಕರನ್ನು ತಯಾರಿಸಿ ಕೊಡುವ ಕಾರ್ಖಾನೆಯೆ, ಹಿಂದೂಗಳನ್ನು ಹಿಂದಕ್ಕೆ ದೂಡುವ ಸಂಸ್ಥೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಆರೆಸ್ಸೆಸ್ ನವರು ಹಿಂದೂಗಳು ಎನ್ನುತ್ತೀರಿ, ಹಾಗಾದರೆ ಇತರ ಪಕ್ಷಗಳಲ್ಲಿ ಇರುವವರು ಹಿಂದೂಗಳಲ್ಲವೆ, ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಮಾಡಿದ್ದಾರಲ್ಲ, ದಲಿತರು ಹಿಂದೂಗಳಲ್ಲವೆ ಎಂದಿತ್ಯಾದಿ ಪ್ರಶ್ನೆ ಕಣೆಗಳನ್ನು ಸಿದ್ದರಾಮಯ್ಯ ಹೂಡಿದ್ದಾರೆ.