ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಮಂಗಳವಾರ ಪೆಟ್ರೋಲ್ ಲೀಟರಿಗೆ 20 ಪೈಸೆ ಮತ್ತು ಡೀಸೆಲ್ ಲೀಟರಿಗೆ 25 ಪೈಸೆ ಏರಿಕೆ ಮಾಡಿದವು.
ಪೆಟ್ರೋಲ್ ಮತ್ತು ಡೀಸೆಲ್‌ಗಳ ಕ್ರಮವಾಗಿ ಒಂದು ಲೀಟರಿನ ಬೆಲೆ ಮುಂಬಯಿಯಲ್ಲಿ ರೂ. 107.47 ಮತ್ತು ರೂ. 97.21; ಬೆಂಗಳೂರಿನಲ್ಲಿ ರೂ. 104.09 ಮತ್ತು ರೂ. 97.21; ದೆಹಲಿಯಲ್ಲಿ ರೂ. 101.19 ಮತ್ತು ರೂ. 89.57 ದರದಲ್ಲಿ ಮಾರಾಟ ಆದವು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೂರು ವರುಷಗಳ ಬಳಿಕ ಇದೇ ಮೊದಲ ಬಾರಿಗೆ ಬ್ಯಾರೆಲ್ ಕಚ್ಚಾ ತೈಲ ಬೆಲೆ 80 ಡಾಲರ್ ಸಮೀಪಿಸಿದೆ.