ಮಂಗಳೂರು ತಾಲೂಕು ಪರಿಷತ್ ವತಿಯಿಂದ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಸಮಷ್ಟಿ ಪ್ರಜ್ಞೆಯ ಸಾಹಿತ್ಯ ಮತ್ತು ಸಮಗ್ರ ಸಮಾಜ ವಿಚಾರ ಸಂಕಿರಣ ನಡೆಯಿತು.
ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಡಾ. ಮೀನಾಕ್ಷಿ ರಾಮಚಂದ್ರ, ಅಕ್ಷಯ ಆರ್. ಶೆಟ್ಟಿ, ಡಾ. ಬಾಲಕೃಷ್ಣ ಭಾರದ್ವಾಜ್, ಡಾ. ವಿಶ್ವನಾಥ ಬದಿಕಾನ ಕನ್ನಡ ಸಾಹಿತ್ಯದ ನಾನಾ ಘಟ್ಟಗಳ ಬಗೆಗೆ ವಿಷಯ ಮಂಡಿಸಿದರು.
ಆರಂಭದಲ್ಲಿ ಡಾ. ಚ. ನ. ಶಂಕರ ರಾವ್ ಉದ್ಘಾಟನೆ ಮಾಡಿದರೆ, ಡಾ. ಅನಸೂಯಾ ರೈ ಮುಖ್ಯ ಅತಿಥಿ ಆಗಿದ್ದರು. ಡಾ. ಶೈಲಜಾ ಏತಡ್ಕ ವಿಷಯ ಪ್ರವೇಶ ಮಾಡಿದರು.