ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಪುತ್ತೂರು: ವಿಭಾಗದ ಭಾರತೀಯ ಅಂಚೆ ಇಲಾಖೆಯು ಮೂಡುಬಿದಿರೆ ಆಳ್ವಾಸ್ ವಿರಾಸತ್ ನ ಸಂದರ್ಭ ಡಿ. 10 ರಿಂದ 15 ರ ವರೆಗೆ ವಿವಿಧ ಸೇವಾ ಸೌಲಭ್ಯಗಳ ವಿಶೇಷ ಮಳೆಗೆಯನ್ನು ತೆರೆದಿರುತ್ತದೆ.
ಇಲ್ಲಿ ಆಧಾರ್ ನೋಂದಣಿ, ತಿದ್ದುಪಡಿ, ಮೈ ಸ್ಟ್ಯಾಂಪ್, ಹವ್ಯಾಸಿ ಸ್ಟ್ಯಾಂಪ್, ವಿಶೇಷ ಅಂಚೆ ಲಕೋಟೆ, ರಾಮ ಜನ್ಮ ಭೂಮಿ ಸ್ಮರಣೆಕೆ, ಸೋಲಾರ್ ಲ್ಯಾಂಪ್, ಐ ಪಿ ಪಿ ಬಿ ಖಾತೆ, ಸಮೂಹ ಅಪಘಾತ ವಿಮೆ, ಜೀವ ವಿಮೆ, ಉಳಿತಾಯ ಖಾತೆ, ಡಿಜಿಟಲ್ ಜೀವನ್ ಪ್ರಮಾಣ ಪತ್ರ, ಆಧಾರ್ ಎ ಟಿ ಎಂ ಇತ್ಯಾದಿ ಸೌಲಭ್ಯಗಳು ಸಾರ್ವಜನಿಕರಿಗೆ ದೊರಕಲಿವೆ ಎಂದು ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ತಿಳಿಸಿರುತ್ತಾರೆ.