ವಿವೇಚನೆ ಇಲ್ಲದ ಲಾಕ್‌ಡೌನ್, ಕರ್ಫ್ಯೂ, ಬಂದ್ ಇವೆಲ್ಲ ಬಡವರನ್ನು ಬೀದಿಗೆ ತಳ್ಳಿವೆ. ಆರ್ಥಿಕ ಭದ್ರತೆ ಒದಗಿಸಿ ಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿ ಎಂದು ರಾಹುಲ್‌ ಗಾಂಧಿಯವರು ಪ್ರಧಾನಿ ಮೋದಿಯವರಿಗೆ ಟ್ವೀಟ್ ಮಾಡಿದ್ದಾರೆ.

ಅವೈಜ್ಞಾನಿಕ, ವಿವೇಚನೆ ಇಲ್ಲದ ಕ್ರಮಗಳಿಂದ ಬದುಕು ಕುಸಿತ, ಕಸಿತ ಕಂಡವರು ಬಡವರು. ಈಗಿನ ಸ್ಥಿತಿಯಲ್ಲಿ ಏಕಪ್ರಕಾರದ ಲಾಕ್‌ಡೌನ್ ಅಗತ್ಯವಿದೆ. ಅದಕ್ಕೆ ಮೊದಲು ನೇರ ನಗದು ಮತ್ತು ಎನ್‌ವೈಎವೈ-ನ್ಯಾಯ್ ಯೋಜನೆಯ ಮೂಲಕ ಬಡವರಿಗೆ ಆರ್ಥಿಕ ವ್ಯವಸ್ಥೆ ಮಾಡಬೇಕು. ಅನಂತರವೇ ಲಾಕ್‌ಡೌನ್ ಮಾಡಬೇಕು‌ ಎಂದು ರಾಹುಲ್ ಪ್ರಧಾನಿಗೆ ಮನವಿ ಮಾಡಿದ್ದಾರೆ.